ಜ್ಞಾನಸುಧಾ: ಸ್ವಾಮಿ ವೀರೇಶಾನಂದ ಸರಸ್ವತಿಯವರಿಂದ ‘ಮೌಲ್ಯಸುಧಾ’ ಉಪನ್ಯಾಸ
ಕಾರ್ಕಳ: ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ‘ಮೌಲ್ಯಸುಧಾ’ ಜರುಗುತ್ತಾ ಬರುತ್ತಿದೆ.
ಜೂನ್ ತಿಂಗಳ ಮೌಲ್ಯಸುಧಾ ಮಾಲಿಕೆ-37 ಜೂನ್ 28 ರ ಸಂಜೆ 6 ಗಂಟೆಗೆ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ರಾಮಕೃಷ್ಣ – ವಿವೇಕಾನಂದ ಆಶ್ರಮ, ರಾಮಕೃಷ್ಣ ನಗರ, ತುಮಕೂರಿನ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಜಿಯವರು ಆಗಮಿಸಲಿದ್ದು, ‘ಸ್ವನಿಯಂತ್ರಣ : ಬಂಧನವೋ? ಸ್ವಾತಂತ್ರ್ಯವೋ?’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಭಾಗವಹಿಸ ಬಹುದೆಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.





