ಟ್ರೆಕ್ಕಿಂಗ್: ದಟ್ಟ ಕಾಡಿನ ನಡುವೆ ಸಿಲುಕಿಕೊಂಡ 10 ಮಂದಿ ಚಾರಣಿಗರು
ಚಿಕ್ಕಮಗಳೂರು: ಚಿತ್ರದುರ್ಗದಿಂದ ಚಾರಣಕ್ಕೆ ತೆರಳಿದ್ದ 10 ಮಂದಿ ಬಲ್ಲಾಳರಾಯನ ದುರ್ಗಾದ ಕಾಡಿನಲ್ಲಿ ಸಿಲುಕಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರುಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಸೋಮವಾರ ಬೆಳಗ್ಗೆ ಬೆಳ್ತಂಗಡಿ ಮಾರ್ಗವಾಗಿ ಟ್ರೆಕ್ಕಿಂಗ್ ಆರಂಭಿಸಿದ ಚಾರಣಿಗರು ದಟ್ಟ ಕಾಡಿನ ನಡುವೆ ಸಿಲುಕಿಕೊಂಡಿದ್ದಾರೆ. ನಂತರ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕೋರಿದ್ದಾರೆ. ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು, ಅರಣ್ಯಾಧಿಕಾರಿಗಳು ಸೇರಿದಂತೆ ಸ್ಥಳೀಯರು ಕೂಡ ಅರಣ್ಯದಲ್ಲಿ ಚಾರಣಿಗರಿಗಾಗಿ ಅರಣ್ಯದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.





