ಮಳೆಗಾಲದಲ್ಲಿ ಆರೋಗ್ಯವಾಗಿರಲು ತಿನ್ನಿ ಕೆಲವೊಂದು ಹಣ್ಣುಗಳನ್ನ…

ಇನ್ನೇನು ಮಳೆಗಾಲ ಬಂದೇ ಬಿಡ್ತು. ಮಳೆ ಬಿದ್ರೆ ಸಾಕು ಒಂದೊಂದೆ ರೋಗಗಳು ಲಗ್ಗೆ ಇಡಲು ಶುರುಮಾಡುತ್ತವೆ. ಹವಾಮಾನ ವೈಪರಿತ್ಯದಿಂದಾಗಿ ಉಂಟಾಗುವ ಕೆಲವೊಂದು ಸಮಸ್ಯೆಗಳು ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿರುತ್ತದೆ. ಆಗಾಗ ಕಾಣಿಸಿಕೊಳ್ಳುವ ಶಿತ, ಕೆಮ್ಮು, ಬಿಟ್ಟು ಬಿಟ್ಟು ಬರುವ ಜ್ವರ ಇಂತಹ ಸಮಸ್ಯೆಗಳೇ ನಮ್ಮನ್ನು ಹೆಚ್ಚಾಗಿ ಕಾಡುತ್ತಿರುತ್ತದೆ. ಇದರ ನಿಯಂತ್ರಣಕ್ಕೆ ಆಹಾರದಲ್ಲಿ ಕೆಲವೊಂದು ಕ್ರಮಗಳನ್ನು ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಈ ಕಾಲದಲ್ಲಿ ಆಹಾರ ಪದ್ಧತಿ ಮೇಲೂ ಸಾಕಷ್ಟು ನಿಗಾ ಹೊಂದಿರಬೇಕು, ಮಳೆಗಾಲಕ್ಕೆ ಹೊಂದಿಕೆಯಾಗುವ ಆಹಾರವನ್ನು ಸೇವಿಸಬೇಕು. ಈ ಕುರಿತು ಮಾಹಿತಿ ಇಲ್ಲಿದೆ..ಕೆಲವೊಂದು ಹಣ್ಣುಗಳ ಸೇವನೆ ಮಾಡುವುದು ಉತ್ತಮ:-ಮಳೆಗಾಲದಲ್ಲಿ ಸೀಸನಲ್ ಹಣ್ಣುಗಳನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಪೀಚ್, ಪ್ಲಮ್, ಚೆರ್ರಿ, ದಾಳಿಂಬೆಯಂತಹ ಸೀಸನಲ್ ಹಣ್ಣುಗಳು ವಿಟಮಿನ್ ಎ ಮತ್ತು ಸಿ ಮತ್ತು ಫೈಬರ್, ಆಂಟಿ ಆಕ್ಸಿಡೆಂಟ್‌ಗಳನ್ನು ಅಧಿಕವಾಗಿ ಹೊಂದಿವೆ. ಇದರ ಜೊತೆಗೆ ಜಾಮೂನ್ ಸಹ ದೇಹಕ್ಕೆ ಒಳ್ಳೆಯದು. ಈ ಹಣ್ಣುಗಳ ತಾಜಾ ಜ್ಯೂಸ್‌ನನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಒಳ್ಳೆಯದು.ಬೆಚ್ಚಗಿನ ದ್ರವಾಹಾರ ಸೇವನೆ ಮಾಡಿಇನ್ನು, ಮಳೆಗಾಲದಲ್ಲಿ ಚಳಿ ಸಹ ಹೆಚ್ಚಿರುತ್ತದೆ, ಈ ವೇಳೆ ದೇಹ ಬೆಚ್ಚಗಿನ ಆಹಾರವನ್ನು ಬಯಸುತ್ತಿರುತ್ತದೆ. ಹೀಗಾಗಿ, ಬಜ್ಜಿ, ಬೋಂಡಾದAಥ ಎಣ್ಣೆಯುಕ್ತ ಪದಾರ್ಥ ತಿನ್ನುವ ಬದಲು ಸೂಪ್, ಮಸಾಲಾ ಚಹಾ, ಹಸಿರು ಚಹಾ, ರಸಂ, ದಾಲ್ ಅಥವಾ ಕಷಾಯಗಳು ಈ ಕಾಲದಲ್ಲಿ ಹೆಚ್ಚು ಹೊಂದುಕೊಳ್ಳುತ್ತವೆ. ಇದು ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ಶೀತ, ಶ್ವಾಸಕೋಶದ ಸಮಸ್ಯೆ ಕಡಿಮೆಯಾಗುವ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಈ ತರಕಾರಿಗಳನ್ನು ಮಿಸ್ ಮಾಡದೇ ತಿನ್ನಿಮಳೆಗಾಲದಲ್ಲಿ ಸೋರೆಕಾಯಿ ಸೀಸನ್ ಆಗಿರುವುದರಿಂದ ಸೋರೆಕಾಯಿಯಲ್ಲಿ ತಯಾರಾದ ಆಹಾರಗಳನ್ನು ಸೇವಿಸುವುದು ಉತ್ತಮ.

ಇನ್ನು, ಕುಂಬಳಕಾಯಿಗಳು, ಸೀಬೆಕಾಯಿಗಳು ಇತ್ಯಾದಿಗಳನ್ನು ಬಳಸಿ. ಹಸಿ ತರಕಾರಿಗಳು ಸಕ್ರಿಯ ಬ್ಯಾಕ್ಟೀರಿಯಾ ಮತ್ತು ಅನಾರೋಗ್ಯಕ್ಕೆ ಕಾರಣವಾಗುವ ವೈರಸ್‌ಗಳನ್ನು ಒಳಗೊಂಡಿರುವುದರಿAದ, ಬದಲಿಗೆ ಬೇಯಿಸಿದ ಸಲಾಡ್‌ಗಳನ್ನು ಆರಿಸಿಕೊಳ್ಳಿ.ಪ್ರೋಟಿನ್‌ಯುಕ್ತ ಪದಾರ್ಥಗಳನ್ನು ಸೇವಿಸಿಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಹೆಚ್ಚು ಪ್ರೋಟಿನ್ ಇರಲಿದೆ. ಹೀಗಾಗಿ, ಬೆಣ್ಣೆ, ತುಪ್ಪ, ಇತರೆ ಪದಾರ್ಥಗಳನ್ನು ಸೇವಿಸಬಹುದು. ಇನ್ನು ಪ್ರೋಟಿನ್ ಮೂಲವಾದ ಬೇಳೆಕಾಳುಗಳು, ಚೋಲೆ, ರಾಜ್ಮಾ, ಸೋಯಾ, ಮೊಟ್ಟೆ ಮತ್ತು ಚಿಕನ್‌ಗಳನ್ನು ನಿಮ್ಮ ಊಟದಲ್ಲಿ ಸೇರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.ಹಸಿರು ಮೆಣಸಿನಕಾಳನ್ನು ಸೇವಿಸಿಮಳೆಗಾಲದಲ್ಲಿ ಹಸಿರು ಮೆಣಸಿನಕಾಳು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ಇದರಲ್ಲಿ ಪೈಪರಿನ್ ಎಂಬ ಆಲ್ಕಲಾಯ್ಡ್ ಇದ್ದು, ಇದು ಹೆಚ್ಚಿನ ಮಟ್ಟದ ವಿಟಮಿನ್ ಸಿ ಮತ್ತು ಕೆ ಅನ್ನು ಒಳಗೊಂಡಿರುವುದರಿAದ ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜೊತೆಗೆ ಅಜೀರ್ಣ, ಗ್ಯಾಸ್ಟಿಕ್‌ನಂಥ ಸಮಸ್ಯೆಗಳನ್ನು ನಿವಾರಿಸಲಿದೆ.ಶುಂಠಿ ಮತ್ತು ಬೆಳ್ಳುಳ್ಳಿ: ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳ ಹೊರತಾಗಿ, ಶುಂಠಿ ಮತ್ತು ಬೆಳ್ಳುಳ್ಳಿ ಆಂಟಿವೈರಲ್ ಗುಣಗಳನ್ನು ಹೊಂದಿದ್ದು ಅದು ಶೀತ ಮತ್ತು ಜ್ವರವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶುಂಠಿ ಚಹಾವು ಗಂಟಲಿನ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!