ಕಾಮಕಸ್ತೂರಿ ಬೀಜದಲ್ಲಿ ಅಡಗಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ..!
ಕಾಮ ಕಸ್ತೂರಿ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ದೇಹಕ್ಕೆ ತಂಪನ್ನು ನೀಡುವ ಕಾಮಕಸ್ತೂರಿ ಅನೇಕ ಆರೋಗ್ಯಕರ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಸಣ್ಣ ಮಕ್ಕಳು ಶಾಲೆಗೆ ತೆಗೆದುಕೊಂಡು ಹೋಗುವ ನೀರಿನ ಬಾಟೆಲ್‌ಗೆ ಈ ಬೀಜವನ್ನು ಹಾಕಿಕೊಂಡು ಹೋಗಿ ಕುಡಿಯುತ್ತಾರೆ. ಮಕ್ಕಳಿಗೆ ಕಾಮಕಸ್ತೂರಿ ಅಂದರೆ ಜೀವ. ಇದನ್ನು ಬೇಸಿಗೆಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಇನ್ನೂ ಉತ್ತಮ. ಕಾಮಕಸ್ತೂರಿ ಬೀಜದ ಇತರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದಾದರೆ ಮುಂದಿನ ಮಾಹಿತಿ ಓದಿ…
ಬೇಸಿಗೆಯಲ್ಲಿ ಕಾಮಕಸ್ತೂರಿಯನ್ನು ನೀರಿನಲ್ಲಿ ನೆನಸಿ ಸೇವಿಸುವುದು ದೇಹಕ್ಕೆ ಒಳ್ಳೆಯದು. ಇದು ದೇಹದಲ್ಲಿನ ಉಷ್ಣಾಂಶವನ್ನು ಕಡಿಮೆಗೊಳಿಸಿ ದೈನಂದಿನ ಚಟುವಟಿಕೆಯಲ್ಲಿ ಲವಲವಿಕೆಯಿಂದಿರಲು ಸಹಾಯ ಮಾಡುತ್ತದೆ. ಇದರಲ್ಲಿ ಕೆಲವು ಔಷಧೀಯ ಗುಣಗಳು ಇವೆ.

ಬಾಯರಿಕೆ ದೇಹ ಹೈಡ್ರೀಕರಿಸಿದ ಸ್ಥಿತಿಯಲ್ಲಿರಲು ಕಾಮಕಸ್ತೂರಿ ಬೀಜಗಳ ಸೇವನೆ ಒಳ್ಳೆಯದು. ಕಾಮಕಸ್ತೂರಿ ಬೀಜಗಳು ಬೆವರಿನಿಂದ ಕಳೆದುಕೊಂಡಿರುವ ಎಲೆಕ್ಟ್ರೋಲೈಟ್‌ಗಳು ಮತ್ತು ನೀರನ್ನು ಬದಲಿಸಲು ಸಹಾಯ ಮಾಡುತ್ತದೆ. ಹೀಗಾಗಿ ಆಗಾಗ ಬಾಯಾರಿಕೆಯಾಗುವ ಸಮಸ್ಯೆ ಉಂಟಾಗುವುದಿಲ್ಲ. ಇದರ ಜೊತೆಗೆ ಇದು ತೂಕ ಇಳಿಸುವುದರಿಂದ ಹಿಡಿದು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಈ ಕಾಮಕಸ್ತೂರಿ ಬೀಜಗಳ ಸೇವನೆ ಮಾಡಬಹುದು. ದೇಹಕ್ಕೆ ಅಗತ್ಯ ಕಾಮಕಸ್ತೂರಿ ಬೀಜಗಳು ವಿಟಮಿನ್ ಎ, ಇ, ಮತ್ತು ಕೆನಂತಹ ವಿಟಮಿನ್‌ಗಳನ್ನು ಖನಿಜಗಳು, ಕ್ಯಾಲ್ಸಿಯಂ, ಮೆಗ್ನೀಶಿಯಮ್ ಮತ್ತು ಕಬ್ಬಿಣದಿಂದ ತುಂಬಿವೆ. ಇವು ನಮ್ಮ ದೇಹಕ್ಕೆ ಅಗತ್ಯವಾದ ನೀರು ಹಾಗೂ ಆಹಾರವನ್ನು ಒದಗಿಸುತ್ತವೆ.
ಕಾಮಕಸ್ತೂರಿ ಬೀಜಗಳು ಹೊಟ್ಟೆಯ ಆಮ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾಮಕಸ್ತೂರಿ ಬೀಜಗಳು ದೇಹವನ್ನು ಹೈಡ್ರೀಕರಿಸುವ ಪರಿಪೂರ್ಣ ಘಟಕಾಂಶವಾಗಿದೆ. ಪದೇ ಪದೇ ಹಸಿವಾಗುವುದನ್ನು ಕಾಮಕಸ್ತೂರಿ ಬೀಜಗಳು ತಡೆಯುತ್ತದೆ. ಹೊಟ್ಟೆ ತುಂಬಿಸಿದ ಅನುಭವವನ್ನು ಉಂಟು ಮಾಡುತ್ತದೆ. ಅಲ್ಲದೆ, ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮ ನೀವು ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು.





