ಸೆಲ್ಫಿ ಹುಚ್ಚಾಟಕ್ಕೆ ಸಮುದ್ರ ಪಾಲಾಗುತ್ತಿದ್ದ ಐವರ ರಕ್ಷಣೆ..!

ಮರಂವತೆ: ಸೆಲ್ಫಿ ಹುಚ್ಚಿಗೆ ಸಮುದ್ರ ಪಾಲಾಗುತ್ತಿದ್ದ ಐವರು ಪ್ರವಾಸಿಗರನ್ನು ರಕ್ಷಿಸಿರುವ ಘಟನೆ ಉಡುಪಿ ಜಿಲ್ಲೆಯ ಮರವಂತೆ ಸಮುದ್ರ ತೀರದ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಿಲ್ಲಾಡಳಿತ, ಲೈಫ್ ಗಾರ್ಡ್ ಅಪಾಯದ ಎಚ್ಚರಿಕೆ ನೀಡಿದರೂ ಕೂಡ ಕೇರೆ ಎನ್ನದ ಪ್ರವಾಸಿಗರು ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿದ್ದು, ಲೈಫ್‌ ಗಾರ್ಡ್‌ ಹಾಗೂ ಸ್ಥಳೀಯರ ಸಮಯಪ್ರಜ್ಞೆಯಿಂದ ಮರವಂತೆಯ ಸಮುದ್ರ ತೀರದಲ್ಲಿ ನಡೆಯುತ್ತಿದ್ದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ರಕ್ಕಸ ಅಲೆಗಳ ರಭಸಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಮೂಲದ ನಾಲ್ವರು ಹಾಗೂ ಗೋವಾ ಮೂಲದ ಓರ್ವ ಮಹಿಳೆಯನ್ನು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಲೈಫ್‌ ಗಾರ್ಡ್‌ ಹಾಗೂ ಅಲ್ಲಿನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಲೈಫ್ ಗಾರ್ಡ್ ಪೃಥ್ವಿರಾಜ್ ಒಪ್ಪಂದ, ಪ್ರಮೋದ್ ರಾಜ್ ಒಪ್ಪಂದ, ಬೀಚ್ ಉಸ್ತುವಾರಿ ಸುರೇಶ್ ಕೊಡೇರಿ ಹಾಗೂ ಇಬ್ರಾಹಿಂ ಗಂಗೊಳ್ಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಪ್ರವಾಸಿಗರನ್ನು ರಕ್ಷಣೆ ಮಾಡಲಾಯಿತು. ಉಡುಪಿಯ ಮಲ್ಪೆ ಸಮುದ್ರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿರುವ ಹಿನ್ನಲೆ ಪ್ರವಾಸಿಗರು ಮರವಂತೆಯಲ್ಲಿ ಹುಚ್ಚಾಟ ಮೆರೆಯುತ್ತಿದ್ದು, ಇಂತಹವರ ವಿರುದ್ದ ಕಠೀಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!