ಕೊತ್ತುಂಬರಿ ಸೊಪ್ಪು ಸೇವಿಸಿ ಲೂಸ್ ಮೋಶನ್ ಸಮಸ್ಯೆಯಿಂದ ದೂರವಿರಿ..!
ಲೂಸ್ ಮೋಶನ್ ಇದು ಅಂದ್ರೆ ಎಲ್ಲರೂ ಕೂಡ ಹೆದರುತ್ತಾಋಎ. ಇದು ಬಂದಾಗ ಜೀವಕ್ಕೆ ಭಯಂಕರ ಸುಸ್ತನ್ನು ಣಿಡುವುದರ ಜೊತೆಗೆ ಮನಸ್ಸಿಗೆ ಹಿಂಸೆಯನ್ನು ನಿಡುತ್ತದೆ. ಎಲ್ಲಿಗೂ ಹೊರಗಡೆ ಹೋಗದ ಪರಿಸ್ಥೀತಿ ಎದುರಾಗುತ್ತದೆ. ಈ ಸಂದರ್ಭದಲ್ಲಿ ಅನೇಕರು ಮಾತ್ರೆಯನ್ನ ಸೇವಿಸುವುದರ ಮೂಲಕ ಅತಿಸಾರ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಇದೂ ಕೂಡ ಶೂನ್ಯ ಪರಿಣಾಮ ಬೀರುತ್ತದೆ. ಇದು ಐಆವ ಕಾಲದಲ್ಲಿ ಬರಬಹುದು ಅಂತಾ ಇಲ್ಲ. ನಮ್ಮ ಆಹಾರ ಸೇವನೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಸಾಕು ಈ ಸಮಸ್ಯೆ ನಮ್ಮನ್ನು ಬಿಟ್ಟುಬಿಡದೇ ಕಾಡುತ್ತದೆ. ಇದಕ್ಕೆ ಇಂಗ್ಲಿಷ್ ಮಡಿಸಿನ್ಸ್ ಮಾಡುವ ಬದಲಾಗಿಯೇ ಮನೆಮದ್ದನ್ನು ಮಾಡುವುದು ಸೂಕ್ತ.
ಹೌದು, ಮನೆಯಲ್ಲಿ ಅಡುಗೆಗ ಬಳಸುವ ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಬೇಧಿ ಸಮಸ್ಯೆಯಿಂದ ಪಾರಾಗಬಹುದು.

ಕೊತ್ತಂಬರಿ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್‌ಗಳ ಆಗರ ಇದು. ಕೊತ್ತಂಬರಿ ಸೊಪ್ಪಿನಲ್ಲಿ ಇರುವ ಆಮ್ಲಗಳು ಶಾಖದ ಹೊಡೆತ ಮತ್ತು ಅತಿಸಾರದ ಪರಿಣಾಮಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ. ಬೇಧಿ ಹೆಚ್ಚಾಗಿದ್ದರೆ ಒಣ ಕೊತ್ತಂಬರಿ ಬೀಜದ ಕಷಾಯ ಮಾಡಿಕೊಂಡು ಕುಡಿಯಿರಿ. ಇದು ಔಷಧದಂತೆ ಕೆಲಸ ಮಾಡುತ್ತದೆ, ದೇಹದಲ್ಲಿರುವ ವಿಷದ ಅಂಶವನ್ನು ಹೊರಹಾಕುತ್ತದೆ.
ಕೊತ್ತಂಬರಿ ಸೊಪ್ಪಿನ ಚಹಾ ಕೂಡ ಪರಿಣಾಮಕಾರಿ. ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುದಿಸಿ. ಅದನ್ನು ಸೋಸಿಕೊಂಡು ಕುಡಿಯಿರಿ. ಪ್ರತಿದಿನ ನೀವು ಮಾಡುವ ಮೇಲೋಗರಗಳಲ್ಲೂ ಕೊತ್ತಂಬರಿ ಸೊಪ್ಪನ್ನು ಬಳಸಿ. ಕೊತ್ತಂಬರಿ ಸೊಪ್ಪು ದೇಹವನ್ನು ತಂಪಾಗಿಡುತ್ತದೆ. ಇದನ್ನು ಮೊಸರಿನ ಜೊತೆ ಕೂಡ ಸೇವನೆ ಮಾಡಬಹುದು.





