ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಇಂದು ನಡೆಯಬೇಕಿದ್ದ ಪ್ರತಿಭಟನೆ ಮುಂದೂಡಿಕೆ

ಉಡುಪಿ: ಮಂಗಳೂರಿನಲ್ಲಿ ನಡೆದ ಅಮಾಯಕನ ಕೊಲೆಯ ಹಿನ್ನೆಲೆಯಲ್ಲಿ ಅಭಿಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು ಆ ಕಾರಣಕ್ಕೆ ಸರ್ಕಾರದ ಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೋಲೀಸ್ ವರಿಷ್ಠಾಧಿಕಾರಿಗಳು ಪ್ರತಿಭಟನಾ ಸಮಾವೇಶವನ್ನು ಮುಂದೂಡಲು ಮನವಿ ಮಾಡಿರುವ ಕಾರಣ ಪ್ರಜಾಪ್ರಭುತ್ವದ ಆಶಯಗಳ ಮೇಲೆ, ಸಂವಿಧಾನದ ಮೌಲ್ಯದ ಮೇಲೆ ಸಂಪೂರ್ಣ ಭರವಸೆ ಹೊಂದಿರುವ ವಕ್ಫ್ ಉಳಿಸಿ – ಸಂವಿಧಾನ ರಕ್ಷಿಸಿ ಉಡುಪಿ ಜಿಲ್ಲಾ ಹೋರಾಟ ಸಮಿತಿ ಮೇ 30 ಶುಕ್ರವಾರ (ಇಂದು) ಸಂಜೆ 4 ಗಂಟೆಗೆ ಮಿಷನ್ ಕಾಂಪೌಂಡ್ ನಲ್ಲಿ ಹಮ್ಮಿ ಕೊಂಡಿರುವ ಪ್ರತಿಭಟನಾ ಸಮಾವೇಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಎಲ್ಲಾ ಸಹೃದಯಿಗಳು ಸಹಕರಿಸಬೇಕೆಂದು ಉಡುಪಿ ಜಿಲ್ಲಾ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!