ಲಾರಿ-ಕಾರು ನಡುವೆ ಡಿಕ್ಕಿ: ಆರು ಮಂದಿ ಸ್ಥಳದಲ್ಲೇ ಸಾವು

ಹೈದರಾಬಾದ್:‌ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಮರೋಲು ಮಂಡಲದ ಅನಂತಪುರ – ಅಮರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಬಾಪಟ್ಲಾ ಜಿಲ್ಲೆಯ ಸ್ಟುವರ್ಟ್‌ ಪುರಂ ಮೂಲದ ಗಜ್ಜೇಲ ಭವಾನಿ (22) ಮತ್ತು ಗಜ್ಜೆಲ ನರಸಿಂಹ (22), ಕರದ್ದುಲ ದಿವಾಕರ್ (26), ಗಜ್ಜೆಲ ಅಂಕಲು (45), ಬಚ್ಚು ಸಂದೀಪ್ (25), ಗಜ್ಜೆಲ ಬಬ್ಬುಲು ಅಲಿಯಾ ಸ್ಜೋಸೆಫ್ (25) ಎಂದು ಗುರುತಿಸಲಾಗಿದೆ.
ಭೀಕರ ರಸ್ತೆ ಅಪಘಾತದಲ್ಲಿ ಆತು ಮಂದಿ ಮೃತಪಟ್ಟಿರೆ, ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ

Leave a Reply

Your email address will not be published. Required fields are marked *

error: Content is protected !!