ಮಳೆಗಾಲದಲ್ಲಿ ಸಾಧ್ಯವಾದಷ್ಟು ನಿಮ್ಮ ಕೂದಲಿನ ಬಗ್ಗೆ ಇರಲಿ ಕಾಳಜಿ..!
ಮಳೆಗಾಲ ಬಂತೆAದರೆ ಸಾಕು, ಕೆಲವರು ತಮ್ಮ ಕೂದಲ ಬಗ್ಗೆ ಯೋಚನೆ ಮಾಡಲು ಶುರು ಮಾಡುತ್ತಾರೆ. ಏಕೆಂದರೆ ಮಳೆಗಾಲದಲ್ಲಿ ಕೂದಲ ಆರೈಕೆ ತುಂಬಾ ಕಷ್ಟ. ಈ ಸಮಯದಲ್ಲಿ ಕೂದಲಲ್ಲಿ ನೀರು ನಿಂತು ಕೂದಲು ಉದುರುವುದು, ಬಿಳಿಕೂದಲ ಸಮಸ್ಯೆ, ತಲೆಯಲ್ಲಿ ತುರಿಕೆಯಂತಹ ಸಮಸ್ಯೆಗಳು ಕೂಡ ಹೆಚ್ಚಾಗಿರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಬಣ್ಣ ಹಚ್ಚುವುದು ತುಂಬಾ ಅಪಾಯಕಾರಿ. ಹಾಗೂ ಕೂದಲಿಗೆ ಬಣ್ಣ ಹಚ್ಚಬೇಕೆಂದರೆ ಕೆಲವೊಂದು ಕಾಳಜಿ ವಹಿಸಿಕೊಳ್ಳಬೇಕು. ಮಳೆಗಾಲದಲ್ಲಿ ಬಣ್ಣ ಹಚ್ಚುವ ಮೊದಲು ನೀವು ಹಚ್ಚುವ ಬಣ್ಣದ ಗುಣಮಟ್ಟವು ಚೆನ್ನಾಗಿದೆಯೇ..? ಇಲ್ಲವೇ..? ಎಂದು ಮೊದಲು ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ ಕಳಪೆ ಗುಣಮಟ್ಟದ ಬಣ್ಣದಿಂದ ಕೂದಲಿಗೆ ತುಂಬಾ ಹಾನಿ ಉಂಟಾಗುತ್ತದೆ.

ನೀವು ಕೂದಲಿಗೆ ಬಣ್ಣ ಹಚ್ಚುವ ಎರಡು ದಿನದ ಮೊದಲು ನಿಮ್ಮ ಕೂದಲಿಗೆ ಎಣ್ಣೆ ಹಾಕಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಬಲಿಷ್ಠವಾಗುತ್ತದೆ ಹಾಗೂ ಈ ಸಮಯದಲ್ಲಿ ಬಣ್ಣ ಹಚ್ಚಿದಾಗ ನಿಮ್ಮ ಕೂದಲಿಗೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಮತ್ತು ಕೆಲವೊಂದು ಸಂದರ್ಭದಲ್ಲಿ ನಿಮ್ಮ ಕೂದಲು ಹೊಳಪು ಕಳೆದುಕೊಳ್ಳುತ್ತವೆ ಅಂತ ಸಮಯದಲ್ಲೂ ಈ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ.
ಬಣ್ಣ ಹಚ್ಚುವವರು ಕಣ್ಣಿನ ಬಗ್ಗೆ ಕಾಳಜಿ ವಹಿಸಬೇಕು. ಏಕೆಂದರೆ ಕೆಲವರಿಗೆ ಕಣ್ಣಿನಲ್ಲಿ ಸೋಂಕಿರುತ್ತದೆ. ಇಂಥವರು ಬಣ್ಣವನ್ನು ಹಚ್ಚಲೇಬಾರದು, ಇದರಿಂದ ಸೋಂಕು ಹೆಚ್ಚಾಗುವ ಸಂಭವ ಇರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಕೂದಲ ಆರೈಕೆ ಚೆನ್ನಾಗಿ ಮಾಡಿಕೊಳ್ಳಿ.

ಏಕೆಂದರೆ ಮಳೆಗಾಲದಲ್ಲಿ ಮಳೆಹನಿಗೆ ಕೂದಲು ಹಾಳಾಗುತ್ತದೆ. ಇದರಿಂದ ಕೂದಲು ಉದುರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮನೆಮದ್ದನ್ನು ಬಳಸಿ ನಿಮ್ಮ ಕೂದಲನ್ನು ರಕ್ಷಿಸಿಕೊಳ್ಳಿ. ಅದರಲ್ಲೂ ತೆಂಗಿನ ಎಣ್ಣೆ ಮಸಾಜ್ ದಿನಕ್ಕೆ ಒಂದು ಬಾರಿಯಾದರೂ ಮಾಡಿಕೊಳ್ಳಿ. ಏಕೆಂದರೆ ಇದು ಕೂದಲನ್ನು ಬಲಿಷ್ಠ ಗೊಳಿಸಿ ಮತ್ತು ಕೂದಲಿಗೆ ತನ್ನ ನೈಜ್ಯ ಹೊಳಪನ್ನು ತಂದು ಕೊಡುತ್ತದೆ. ಹಾಗೂ ಕೂದಲಿಗೆ ಬಣ್ಣ ಹಚ್ಚುವ ಮೊದಲು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೂ ಈ ಬಣ್ಣ ನಿಮ್ಮ ಕೂದಲಿನ ಚರ್ಮಕ್ಕೆ ಯಾವುದೇ ತೊಂದರೆಯಾಗದAತೆ ಕಾಳಜಿ ವಹಿಸಿ. ಕೆಲವೊಮ್ಮೆ ಕೂದಲಿಗೆ ಬಣ್ಣ ಹಚ್ಚುವಾಗ ನಿಮ್ಮ ಚರ್ಮದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಬಣ್ಣವನ್ನು ಕೂದಲಿನ ಸ್ವಲ್ಪ ಜಾಗದಲ್ಲಿ ಲೇಪಿಸಿ. ಒಂದು ವೇಳೆ ನಿಮಗೆ ತುರಿಕೆ ಕಾಣಿಸಿಕೊಂಡರೆ ಆ ಸಂದರ್ಭದಲ್ಲಿ ಬಣ್ಣ ಹಚ್ಚುವುದು ಒಳ್ಳೆಯದಲ್ಲ. ಆಗ ಎರಡು ಮೂರು ದಿನಗಳವರೆಗೆ ತೆಂಗಿನ ಎಣ್ಣೆಯಲ್ಲಿ ಮಸಾಜ್ ಮಾಡಿ ನಂತರ ಬಣ್ಣ ಹಚ್ಚಿದರೆ ಆಗ ನಿಮ್ಮ ಕೂದಲಿಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಕೂದಲಿನ ಆರೈಕೆಯನ್ನು ಮಾಡಿ ಹಾಗೂ ಕೂದಲನ್ನು ಹಾಳಾಗದಂತೆ ನೋಡಿಕೊಳ್ಳಿ.





