ಬೆಳಿಗ್ಗೆ ಎದ್ದಾಕ್ಷಣ ತಲೆನೋವು ಕಾಣಿಸಿಕೊಳ್ಳುತ್ತಿದ್ದರೆ ಇಲ್ಲಿದೆ ಸೂಕ್ತ ಪರಿಹಾರ..!
ಇಂದಿನ ದಿನಗಳಲ್ಲಿ ಒತ್ತಡದ ಜೀವನದಿಂದ ನಿದ್ರೆ ಬರುವುದಿಲ್ಲ. ಇದರಿಂದ ಅನೇಕ ಜನರಿಗೆ ಬೆಳಗ್ಗೆ ಎದ್ದ ತಕ್ಷಣ ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಹೇಗೆ ಮುಕ್ತಿ ಹೊಂದಬೇಕು ಎನ್ನುವುದೇ ಅವರಿಗೆ ತಿಳಿಯದಾಗಿರುತ್ತದೆ. ಕೆಲವರು ಈ ತಲೆನೋವನ್ನು ಸಾಮಾನ್ಯವೆಂದುಕೊಂಡು ಬಿಟ್ಟುಬಿಡುತ್ತಾರೆ. ಆದರೆ ಇತರ ಮಾಡುವುದು ದೊಡ್ಡ ತಪ್ಪು ಎಂದು ತಜ್ಞರು ಹೇಳುತ್ತಾರೆ. ಹಿಂದೆ ದೊಡ್ಡ ಕಾರಣಗಳಿವೆ ಅದೇನೆಂದರೆ ಬೆಳಿಗ್ಗೆ ಎದ್ದಾಕ್ಷಣ ಕಾಣಿಸಿಕೊಳ್ಳುವ ತೀವ್ರವಾದ ತಲೆನೋವಿಗೆ ದೇಹದಲ್ಲಿ ನೀರಿನ ಕೊರತೆ ಮತ್ತು ನಿದ್ರಾಹೀನತೆ ಕಾರಣವಾಗುತ್ತದೆ.

ಒಂದು ವೇಳೆ ಇಂಥ ಸಮಸ್ಯೆಗಳಿದ್ದರೆ ಆದಷ್ಟು ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿರುತ್ತದೆ. ಪ್ರಮುಖವಾದ ಕಾರಣವೆಂದರೆ ದೇಹದಲ್ಲಿನ ರಕ್ತದ ಕೊರತೆ ಹಾಗೂ ಆಮ್ಲಜನಕದ ಕೊರತೆ. ಕೆಲವು ಜನರು ರಾತ್ರಿ ಹೊತ್ತು ಮಲಗುವಾಗ ಕಡಿಮೆ ನೀರು ಕುಡಿದುಕೊಂಡು ಮಲಗುತ್ತಾರೆ. ಇದು ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದರಿಂದಲೂ ಸಹ ಬೆಳಗ್ಗೆ ಎದ್ದ ತಕ್ಷಣ ತಲೆನೋವು ಬರುವ ಸಂಭವ ಇರುತ್ತದೆ. ಕೆಲವರಿಗೆ ಕೆಲಸದ ಒತ್ತಡದಿಂದ ಸರಿಯಾದ ನಿದ್ರೆ ಇರುವುದಿಲ್ಲ. ಅಂತ ಸಂದರ್ಭದಲ್ಲಿ ಅವರಿಗೆ ನಿದ್ರಾಹೀನತೆ ಅಂತ ಸಮಸ್ಯೆ ಕಾಡುತ್ತದೆ. ಅದರಲ್ಲೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಈ ತಲೆನೋವು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಇಂತಹ ತಲೆನೋವು ಇರುವವರು ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನ ಬದಲಿಗೆ ನಿಂಬೆರಸವನ್ನು ನೀರಲ್ಲಿ ಬೆರೆಸಿ ಕುಡಿಯುವುದರಿಂದ ತಲೆನೋವು ಶಮನವಾಗುತ್ತದೆ. ಆ ಸಂದರ್ಭದಲ್ಲಿ ನೀವು ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು. ಹಾಗೆ ಸ್ವಲ್ಪ ಹೊತ್ತು ನಿದ್ರೆ ಮಾಡಿ. ಸಾಧ್ಯವಾದಷ್ಟು ಯೋಗ ಮತ್ತು ಧ್ಯಾನ ಮಾಡಿ ಇದರಿಂದ ನಿಮ್ಮ ತಲೆನೋವಿನ ಸಮಸ್ಯೆ ದೂರವಾಗುತ್ತದೆ. ಹೀಗೆ ನೀವು ಆರೋಗ್ಯಯುತವಾಗಿ ಇರಬೇಕೆಂದರೆ ನಿಮ್ಮ ಒತ್ತಡ ಜೀವನವನ್ನು ಬಿಟ್ಟು ಸರಿಯಾದ ಜೀವನವನ್ನು ಆರಿಸಿಕೊಳ್ಳಬೇಕು. ಇಲ್ಲದಿದ್ದರೆ ಇದೇ ತರಹದ ಬೇರೆ ಬೇರೆ ಸಮಸ್ಯೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತವೆ. ಹೀಗಾದರೆ ಇದಕ್ಕೆ ಯಾವುದೇ ಪರಿಹಾರ ಇರುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಒತ್ತಡದ ಜೀವನ ಹಾಗೂ ಇತರ ಸಮಸ್ಯೆಗಳಿಂದ ಮುಕ್ತಿ ಹೊಂದಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ.





