ಕೊರೋನಾ ಅಂತಂಕದಿಂದ ದೂರವಾಗುವುದು ಹೇಗೆ? ಏನೆನ್ನುತ್ತಾರೆ ಖ್ಯಾತ ಮನೋವೈದ್ಯ ಪಿ.ವಿ ಭಂಡಾರಿ

ಡಾ.ಪಿ.ವಿ.ಭಂಡಾರಿ ಮನೋವೈದ್ಯರು, ಉಡುಪಿ.

ಕೋವಿಡ್ ಸಂದರ್ಭದಲ್ಲಿ ನೋಡುತ್ತಿರುವ ಮೂರು ಜಾತಿಯ ಜನರು.
1) ಕೋವಿಡ್ ಸಮಸ್ಯೆ ಒಂದು ಸಮಸ್ಯೆ ಅಲ್ಲ ..ಎಲ್ಲಿದೆ ಕೋರೋಣ ಅನ್ನುವವರು.ಯಾವುದೇ ನಿಯಮಗಳ ಪಾಲಿಸದೆ ಮಾಸ್ಕ್ ಹಾಕದೆ..ಸಾಮಾಜಿಕ ಅಂತರ ಕಾಪಾಡದೆ ಕೈ ತೊಳೆಯದೆ ಇರುವವರು..covidiots

2) ಕೋವಿಡ್ ಅಂದರೆ ಮುಗಿಯಿತು.ಸತ್ತೆ ಹೋಗುತ್ತೇವೆ.ಇದು ಮಾರಣಾಂತಿಕ.. ಮೀಡಿಯಾ ಹೇಳುವ ಸಮಾಚಾರಗಳನ್ನು ನಿಜ ಎಂದು ಕೊಂಡು ಹೆದರಿ ಖಿನ್ನಾರಾಗಿ ಮನೆಯಿಂದ ಹೊರಗೆ ಬಾರದೆ..ಜನರಿಂದ ದೂರವಾಗಿ ಕೆಲಸ ಮಾಡದೆ ಅಳುತ್ತಾ ಹೆದರುತ್ತಾ ಕುಳಿತು ಕೊಳ್ಳುವವರು

3) ಕೋವಿಡ್ ಬಗ್ಗೆ ವೈಜ್ಞಾನಿಕ ವಿಚಾರಗಳ ತಿಳಿದು ಸರ್ಕಾರ ಹೇಳುವ ನಿಯಮ ಪಾಲಿಸಿ ಹಾಗೆಯೇ ಆರೋಗ್ಯ ಕಾಪಾಡಿಕೊಂಡು ಇತರರಿಗೂ ತಮಗೆ ತಿಳಿದಿರುವ ಜ್ಞಾನ ಹಂಚಿಕೊಂಡು ಸುತ್ತಮುತ್ತಲಿನವರು ಧೈರ್ಯವಾಗಿ ಇರುವಂತೆ ಮಾಡಿ ಅರ್ಹರಿಗೆ ಕೈಲಾದ ಸಹಾಯ ಮಾಡುತ್ತಾ ಈ ಸನ್ನಿವೇಶ ಎದುರಿಸುವವರು.

ಇಂದು ಮೂರನೆಯ ಜಾತಿಯ ಜನರ ಅಗತ್ಯತೆ ಬಹಳ ಇದೆ.ಕೋವಿಡ್ 2 ನೆ ಅಲೇ ಯಲ್ಲಿ ನೋಡುತ್ತಿರುವುದು ಎಂದರೆ ಬಹಳಷ್ಟು ಸಮಸ್ಯೆಗಳು ಸರ್ಕಾರ ಹಾಗೂ ಜನರ ತಯ್ಯಾರಿ ಯ ಕೊರತೆಯಿಂದಾಗಿ ಆಗಿರುವುದು.ಸರ್ಕಾರ ಮತ್ತು ವಿರೋಧ ಪಕ್ಷಗಳು ಚುನಾವಣೆಯಲ್ಲಿ ಮೈಮರೆತು ಹೋಗಿದ್ದಾರೆ ಜನರು ಕುಂಬ ಮೇಳ ,ಚಂಡಿಕಾ ಯಾಗ ,ಉರ್ಸ್ ,ಪ್ರಾರ್ಥನಾ ಕೂಟಗಳಲ್ಲಿ ಮೈಮರೆತು ಕೋವಿಡ್ ಪುನಃ ಬರುವ ಹಾಗೆ ಮಾಡಿಕೊಂಡೆವು. ಹಾಗೆಯೇ ವ್ಯಾಕ್ಸಿನ್ ಬಗ್ಗೆ ತಪ್ಪು ಕಲ್ಪನೆಗಳಿಂದ ಅದನ್ನು ತೆಗೆದು ಕೊಳ್ಳ ಲೂ ಹಿಂದೇಟು ಹಾಕಿ ಇಂದು ಈ ಸ್ಥಿತಿಗೆ ಬಂದಿದ್ದೇವೆ.ಈ ರೋಗ ನಮಗೆ ಏನು ಮಾಡುವುದಿಲ್ಲ ..ನಮಗೆ ಸಾಕಷ್ಟು ರೋಗ ನಿರೋಧಕ ಶಕ್ತಿ ಇದೆ ಎಂಬ ಅಂಧ ವಿಶ್ವಾಸ ಹಾಗೆಯೇ ಗಿಡ ಮೂಲಿಕೆಗಳು ,ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿದರೆ ವೈರಸ್ ಸಾಯುತ್ತದೆ ..ಮಂತ್ರ ಜಪ ತಪ ಹಾಗೂ ಪ್ರಾರ್ಥನೆಗಳು ಈ ರೋಗದ ಸಮಸ್ಯೆ ಕಡಿಮೆ ಮಾಡುತ್ತದೆ ಎಂಬ ಅವೈಜ್ಞಾನಿಕ ನಿಲೂವುಗಳೆ ನಮಗೆ ಮಾರಕವಾಗಿದೆ.
Vaccine ತಯ್ಯಾರಿ ಯಲ್ಲಿ ಮುಂದೆ ಹೋಗಿಯೂ ಅದರ ಉಪಯೋಗ ಮಾಡಿಕೊಳ್ಳದ ಹಂತದಲ್ಲಿ ನಾವಿದ್ದೇವೆ. ಒಬ್ಬ ವೈದ್ಯನಾಗಿ ನನ್ನ ನಿರೀಕ್ಷೆ ನಾವು ಇದೆ ರೀತಿ ಮುಂದುವರಿದಲ್ಲಿ ಇನ್ನೂ ಹೆಚ್ಚು ಸಾವು ನೋವು ಖಚಿತ. ಇಂತಹ ಸಂದರ್ಭದಲ್ಲಿ ಜಾತಿ ಮತ ಭೇದ ಮರೆತು ರಾಜಕೀಯ ವೈಷಮ್ಯ ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡಿದಲ್ಲಿ ಸ್ವಲ್ಪ ಮಟ್ಟಿಗಾದರೂ ಪರಿಸ್ಥಿತಿ ಬದಲು ಮಾಡಬಹುದು.

ಜನತೆ ಏನು ಮಾಡಬಹುದು
1) ಜನಸಂದಣಿಯನ್ನು ತಪ್ಪಿಸಿ
2) ಅನಗತ್ಯವಾಗಿ ಸಾಮಾಜಿಕ ಅಂತರ ವಿಲ್ಲದೆ ನಿಂತು ಮಾತಾಡುವುದು
3) ಕಡಿಮೆ ವತಾಯನ ಇರುವ ಸ್ಥಳಗಳನ್ನು ಉಪಯೋಗಿಸುವಾಗ ಮಾಸ್ಕ್ ಧರಿಸಿ
4) ಪದೇಪದೇ ಕೈ ತೊಳೆಯುವುದು..ಸಾಬೂನು ಹಾಕಿ
5) ಜ್ವರ ಕೆಮ್ಮು ತಲೆನೋವು ನೆಗಡಿ ಬಂದರೆ ಒಂದು ವಾರದ ಕಾಲ ಮನೆಯಲ್ಲೇ ಇರುವುದು
6) ಉಸಿರಾಟದ ತೊಂದರೆ ನೆಗಡಿ ಜ್ವರ ತೀವ್ರ ವಾದಲ್ಲಿ RTPCR ಟೆಸ್ಟ್ ಮಾಡಿಸಿ ಮನೆಯಲ್ಲೇ isolate ಮಾಡಿಕೊಳ್ಳುವುದು.ಟೆಸ್ಟ್ positive ಇದ್ದರೆ ಹೋಂ isolation ತಪ್ಪದೆ ಮಾಡುವುದು.ಹಾಗೆಯೇ ಅವರ ಮನೆಯವರು ಕೂಡ ಮನೆಯಿಂದ ಹೊರಗೆ ಹೋಗದೆ ಇರುವುದು.


ಸಂಘ ಸಂಸ್ಥೆಗಳ ಪಾತ್ರ.
1) ಅರ್ಹರ ಸಹಾಯ.ಹಲವಾರು ಜನ ತಮ್ಮ ಪ್ರೀತಿಪಾತ್ರರನ್ನು ಕಳೆದು ಕೊಳ್ಳುತ್ತಿದ್ದಾರೆ.ಲಾಕ್ ಡೌನ್ ಕಾರಣದಿಂದ ಹಣಕಾಸಿನ ತಾಪತ್ರಯಗಳು ಅನುಭವಿಸುತ್ತಿದ್ದಾರೆ ಅಂತ ಹ ಜನರ ಗುರುತಿಸಿ ಅವರ ಸ್ವಾಭಿಮಾನಕ್ಕೆ ದಕ್ಕೆ ಬಾರದ ಹಾಗೆ ಸಹಾಯ ಮಾಡುವುದು.

2) ಹಿರಿಯ ನಾಗರಿಕರ ಸಹಾಯಕ್ಕೆ ಯುವ ಜನರ ತಂಡ ರಚನೆ.ಅವರಿಗೆ ಅಗತ್ಯ ಗ್ರಹೌಪಯೋಗಿ ಸಾಮನು ತರಿಸಿಕೊಡುವುದು ಔಷಧಿ ತಂದು ಕೊಡುವುದು ಹಿರಿಯರ ಲಸಿಕೆ ಹಾಕಿಸಲು ಅವರನ್ನು ಹುರಿದುಂಬಿಸುವ ಹಾಗೂ ಕರೆದುಕೊಂಡು ಹೋಗುವ ಕೆಲಸ

3) ಕೋವಿಡ್ ಸೊಂಕಿತರು ಎಂದು ಸಂಶಯ ಇರುವಾಗ ಅವರಿಗೆ ಅಗತ್ಯ ಟೆಸ್ಟ್ ಮಾಡಲು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡುವುದು
4) ಕೊಳಗೇರಿ ಕ್ಯಾಂಪ್ ಗಳಲ್ಲಿ ಇರುವ ಮಕ್ಕಳು ಹೆಣ್ಣುಮಕ್ಕಳು ಇವರ ಆರೋಗ್ಯ ಕಾಪಾಡಲು ಸಹಾಯ ಮಾಡುವುದು
5)ಕೋವಿಡ್ ನಿಯಮ ಪಾಲಿಸದ ಜನರನ್ನು ಎಚ್ಚರಿಸುವ ಹಾಗೂ ಮಾಡದೆ ಇರಲು ಕಾರಣ ತಿಳಿದು ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಕೆಲಸ
ಸರ್ಕಾರ
ಆರೋಗ್ಯ ಸಂಸ್ಥೆಗಳ ಸೌಕರ್ಯಗಳ ದೃಡೀಕರಣ.ಜೀವ ಕಾಪಾಡುವ ವೆಂಟಿಲೇಟರ್ ,ಆಕ್ಸಿಜನ್, ಆರೋಗ್ಯ ಸೇವಾ ಕಾರ್ಯಕರ್ತರು ವೈದ್ಯರು ಇವರ ಸಂಖ್ಯೆ ಜಾಸ್ತಿಯಾಗ ಬೇಕು
ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಿರಿಯ ನಾಗರೀಕರು,ಬಿಪಿ ಶುಗರ್ ಹೃದ್ರೋಗ ಅನಾರೋಗ್ಯ ಪೀಡಿತರು,ಇವರುಗಳಿಗೆ ಸಿಗುವಂತೆ ಹಾಗೆಯೇ ಕನಿಷ್ಠ ಶೇಕಡಾ 70 ಜನಸಂಖ್ಯೆ ಲಸಿಕೆ ಪಡೆದುಕೊಳ್ಳುವಂತೆ ಆದರೆ ಕೋವಿಡ್ ಹರಡದಂತೆ ಪ್ರಯತ್ನಿಸ ಬಹುದು.
ಲಾಕ್ ಡೌನ್ ನಿಜವಾಗಿಯೂ ಸಹಾಯ ಮಾಡುವುದೇ ಎಂಬುದನ್ನು ತಜ್ಞರೊಂದಿಗೆ ಚರ್ಚಿಸಿ ನಿರ್ಧರಿಸಿ ಅನಿವಾರ್ಯ ಯೆಂದಲ್ಲಿ ಅರ್ಹ ರ ಗುರುತಿಸಿ ಅವರಿಗೆ ಪಡಿತರ ವ್ಯವಸ್ಥೆ ಹಾಗೇ ಜನ ಸಾಮಾನ್ಯರಿಗೆ ಕೋವಿಡ್ ಬಿಟ್ಟು ಬೇರೆ ಆರೋಗ್ಯ ಸಮಸ್ಯೆ ಇದ್ದಲಿ ಅಗತ್ಯ ಸಹಾಯ ಹಾಗೆಯೇ ಸಾಲ ಮಾಡಿದವರಿಗೆ ಕಂತು ಕಟ್ಟಲು ಸಮಯಾವಕಾಶ ಮುಂತಾದವುಗಳ ಬಗ್ಗೆ ಸರ್ಕಾರ ಯೋಚಿಸಬೇಕು.ಒಟ್ಟಿನಲ್ಲಿ ಈ ಪರಿಸ್ಥಿತಿ ವೈಜ್ಞಾನಿಕ ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ಎದುರಿಸುವ ಪ್ರಯತ್ನ ಮಾಡುವ.

ಡಾ.ಪಿ.ವಿ.ಭಂಡಾರಿ ಮನೋವೈದ್ಯರು ಉಡುಪಿ

Leave a Reply

Your email address will not be published. Required fields are marked *

error: Content is protected !!