ಗಂಗೊಳ್ಳಿ: ವ್ಯಕ್ತಿಗೆ 3.27 ಲ.ರೂ ವಂಚನೆ

ಗಂಗೊಳ್ಳಿ ಮೇ 15(ಉಡುಪಿ ಟೈಮ್ಸ್ ವರದಿ): ಬ್ಯಾಂಕ್ ಹೆಸರಲ್ಲಿ ಸಂದೇಶ ಕಳಿಸಿ ವ್ಯಕ್ತಿಯೊಬ್ಬರಿಗೆ 3.27  ಲಕ್ಷ ರೂ. ವಂಚಿಸಿರುವ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮರವಂತೆಯ ರಾಜೇಶ ಎಂಬವರ ವಾಟ್ಸಪ್‌ಗೆ  ಕೆನರಾ ಬ್ಯಾಂಕ್ ಹೆಸರಿನಲ್ಲಿ ಮೆಸೇಜ್‌ವೊಂದು ಬಂದಿತ್ತು. ಈ ವೇಳೆ ರಾಜೇಶ್ ಅವರು  ಈ ಬಗ್ಗೆ ವಿಚಾರಿಸಲು  ಕೆನರಾ ಬ್ಯಾಂಕ್ ಗೆ ಹೋಗಿ ಮೆನೇಜರ್ ರವರಲ್ಲಿ ವಿಚಾರಿಸಿದಾಗ, ಅವರು ತಮ್ಮ ಬ್ಯಾಂಕ್ ನಿಂದ ಯಾವುದೇ ಮೆಸೆಜ್ ಕಳುಹಿಸಿಲ್ಲವಾಗಿಯೂ ಆ ಮೆಸೆಜ್ ನ್ನು ಡಿಲಿಟ್ ಮಾಡುವಂತೆ ಹೇಳಿರುತ್ತಾರೆ. ಆ ಪ್ರಕಾರ  ಬ್ಯಾಂಕ್ ನಲ್ಲಿಯೇ ರಾಜೇಶ್ ಅವರು  ವಾಟ್ಸಪ್ ಮೆಸೆಜ್ ನ್ನು ಡಿಲಿಟ್ ಮಾಡಿದ್ದರು. ಆ  ನಂತರ ಸಂಜೆ ರಾಜೇಶ್ ಅವರ ಬೇರೆ ಬೇರೆ ಖಾತೆಯಿಂದ ಒಟ್ಟು ರೂ 3,27,962  ವಿತ್ ಡ್ರಾ ಆಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!