ಬಿಜೆಪಿ ಚುನಾವಣಾ ರಣತಂತ್ರ ಹೇಗಿರುತ್ತೆ ಗೊತ್ತಾ?
ಲೇಖಕರು :ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ .ಉಡುಪಿ
(ಉಡುಪಿ ಟೈಮ್ಸ್) : ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಿಜಕ್ಕೂ ಸೇೂತಿದೆಯೂ?ಬಿಜೆಪಿ ಚುನಾವಣಾ ರಣತಂತ್ರ ಹೇಗಿರುತ್ತೆ ಗೊತ್ತಾ?ಯಾರು ಊಹಿಸಲು ಅಸಾಧ್ಯವಾದ ಚಾಣಕ್ಯ ತಂತ್ರ.ಒಂದು ರೀತಿಯಲ್ಲಿ ಚೆಸ್ ಆಟದ ಹಾಗೆ..
ಸಣ್ಣ ಕಾಲಾಳುಗಳನ್ನು((coins) ಕಳೆದು ಕೊಂಡರು ಅಂದ ತಕ್ಷಣವೇ ಇವರು ಸೇೂತರು ಅಂತ ನೀವು ನಕ್ಕು ಬಿಟ್ಟರೆ ಕಾದಿದೆ ನಿಮಗೆ ಮುಂದೆ ಅಪಾಯದ ದಿನ ವೆಂದೇ ಅಥ೯.ಸೊನ್ನೆಯಿಂದ ನೂರಕ್ಕೆ ಜಿಗಿಯುವ ಜಾಯಮಾನ.ಈ ಜಾಯಮಾನ ಅಥ೯ಮಾಡಿಕೊಳ್ಳದ ರಾಷ್ಟ್ರೀಯ ಪಕ್ಷ ;ಪ್ರಾದೇಶಿಕ ಪಕ್ಷಗಳು ಇಂದು ಎಂದೂ ಎದ್ದು ಬಾರದ ಕೂಪಕ್ಕೆ ಬಿದ್ದು ಲವ ಲವ ಒದಾಡುತ್ತಿರುವ ಪರಿಸ್ಥಿತಿ ..ಇದರ ಸಂಕ್ಷಿಪ್ತ ರೇೂಚಕ ತಂತ್ರಗಾರಿಕೆ ಇಲ್ಲಿದೆ ನೇೂಡಿ.
1. ಯಾವುದೇ ಚುನಾವಣೆಯ ಆಖಾಡಕ್ಕೆ ಇಳಿಯುವ ಮೊದಲು ಸ್ಥಳ ಮತ್ತು ಪರಿಸ್ಥಿತಿ ಅಧ್ಯಯನ.
2. ಏಕ ಪಕ್ಷವಾಗಿ ಸ್ಪರ್ಧಿಸಿ ಗೆಲ್ಲಲು ಸಾದ್ಯವಿಲ್ಲ ಅನ್ನುವ ಪರಿಸ್ಥಿತಿಯಲ್ಲಿ ಅಲ್ಲಿನ ಯಾವುದಾದರೂ ಪ್ರಬಲ ಸ್ಥಳೀಯ ಪಕ್ಷದ ಜೊತೆಗೆ ಹೊಂದಾಣಿಕೆಗೆ ಪ್ರೀತಿ ತೇೂರಿಸುವುದು. ಗೆದ್ದ ಮೇಲೆ ನಿಧಾನವಾಗಿ ಆಡಳಿತದ ಮೂಲಕ ಜನರ ಒಲವು ಗಳಿಸುವ ನೀತಿ ಪ್ರಕಟಿಸುವುದು…ಕ್ರಮೇಣ ಆ ಸ್ಥಳೀಯ ಪಕ್ಷವನ್ನು ಬದಿಗೆ ಸರಿಸಿ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯುವುದು.ಉದಾ:ಮಹಾರಾಷ್ಟ್ರ, ಬಿಹಾರ ,ಜಮ್ಮು ಕಾಶ್ಮೀರ ,ಕರ್ನಾಟಕ ಕೂಡಾ. ಒಮ್ಮೆ ಆ ರಾಜ್ಯದಲ್ಲಿ ಪಕ್ಷ ಹಿಡಿತ ಸಾಧಿಸಿದ ಮೇಲೆ ತಮ್ಮದೇ ಸಾಮ್ರಾಜ್ಯ ಸ್ಥಾಪನೆ..ಉ.ಪ್ರ.ಅಸ್ಸಾಂ ..
- ತಾವು ಮಾಡಿ ಕೊಳ್ಳುವ ತಾತ್ಕಾಲಿಕ ಹೊಂದಾಣಿಕೆಗಳು ತಮ್ಮ ಸಾಮ್ರಾಜ್ಯದ ವಿಸ್ತರಣೆಗೆ ಹೊರತು ಸ್ಥಳೀಯ ತುಂಡರಸರನ್ನು ಬೆಳೆಸಿ ಸಾಮ್ರಾಜ್ಯ ಅವರಿಗೆ ನೀಡುವ ಯೇೂಚನೆ ಖಂಡಿತವಾಗಿಯೂ ಇಲ್ಲ. ಇದು ಪಕ್ಷ ಬೆಳೆಸುವ ಕೌಶಲ್ಯವೂ ಹೌದು.ಆದರೆ ಬೇರೆ ರಾಷ್ಟ್ರೀಯ ಪಕ್ಷ ಸ್ಥಳೀಯ ಹೊಂದಾಣಿಕೆ ಮಾಡಿಕೊಳ್ಳುವುದು ತಾನು ಬೆಳೆಯುದಕ್ಕಿಂತ ಬಿಜೆಪಿ ಯನ್ನು ಹೇಗಾದರೂ ಮಾಡಿ ಸೇೂಲಿಸ ಬೇಕೆಂಬ ವಿಧುರ ನೀತಿ…ಹಾಗಾಗಿ ಅವರು ಬೆಳೆಯುವುದಿಲ್ಲ ಇವರನ್ನು ನಂಬಿಕೊಂಡು ಬಂದ ಪಕ್ಷಗಳು ಮುಳುಗುವ ಪರಿಸ್ಥಿತಿ.
4 .ಬಿಜೆಪಿ ಕೇವಲ ಮೂರು ದಶಕ ಗಳಲ್ಲಿ ರಾಜ್ಯ ರಾಷ್ಟ್ರ ವ್ಯಾಪಿಯಾಗಿ ಅಧಿಕಾರದ ಸಾಮ್ರಾಜ್ಯ ವನ್ನು ವಿಸ್ತರಣೆ ಮಾಡಿಕೊಂಡ ಚುನಾವಣಾ ರಣತಂತ್ರವಿದು.ಅವರದ್ದೆ ಆದ ಕೆಲವು ರಾಜ್ಯ ಗಳಲ್ಲಿ ಸುಲಭವಾಗಿ ಅಧಿಕಾರ ಸ್ಥಾಪನೆ ಮಾಡುವುದರ ಜೊತೆಗೆ ಅವರ ತತ್ವ ಸಿದ್ಧಾಂತಗಳ ಬೇರು ತಳವೂರದ ರಾಜ್ಯ ಗಳಾದ ಅಸ್ಸಾಂ ಪುದುಚೇರಿ ಗೇೂವಾ ರಾಜ್ಯ ಗಳಲ್ಲಿ ಕೇಸರಿ ಪತಾಕಿ ಹಾರಿಸಿದ ಬಿಜೆಪಿ ಮುಂದಿನ ಸಾಮ್ರಾಜ್ಯ ವಿಸ್ತರಣೆ ಗಾಗಿ ಪಶ್ಚಿಮ ಬಂಗಾಳದ ಕಡೆಗೆ ಮುಖಮಾಡಿದೆ.
ಮೇ 2ರ ಫಲಿತಾಂಶವನ್ನು ನೇೂಡಿದವರು ಈ ಬಿಜೆಪಿ ಸೇೂತೇ ಹೇೂಯಿತು ಅಂದು ಕೊಂಡವರು ಕೆಲವು ಮಂದಿ..ಆದರೆ ಬಿಜೆಪಿಗೆ ಮಾತ್ರ ಈ ಸೇೂಲಿನಲ್ಲಿಯೇ ಉಜ್ವಲ ಭವಿಷ್ಯ ಕಾಣತ್ತಿರವುದು ಆಶ್ಚರ್ಯವಾದರೂ ಸತ್ಯ.
2016 ರ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನ ಗಳಿಸಿಕೊಂಡ ಬಿಜೆಪಿ 2021ರಲ್ಲಿ 74 ಸ್ಥಾನ ಗಳನ್ನು ಪಡೆಯುವುದರೊಂದಿಗೆ ಮುಂದಿನ ಚುನಾವಣಾ ಕಣಕ್ಕೆ ಭದ್ರ ಬುನಾದಿ ಹಾಕಿ ಕೊಂಡಿದೆ.ಮಾತ್ರವಲ್ಲ ಸುಮಾರು 92 ಕ್ಷೇತ್ರಗಳಲ್ಲಿ ಕೇವಲ ಒಂದು ಸಾವಿರ ಮತಗಳ ಅಂತರದಲ್ಲಿ ಸೇೂತಿರುವುದು ಕೂಡಾ ಮುಂದಿನ ಚುನಾವಣೆಯ ಗೆಲುವಿನ ದಿಕ್ಸೂಚಿ ಎಂದೇ ಬಿಜೆಪಿ ಭಾವಿಸಿ ಕೊಂಡಿದೆ. ಬಿಜೆಪಿ ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ ಶೇ.10ರಷ್ಟು ಮತಗಳಿಕೆ ಮಾಡಿದ್ದರೆ ಈ ಬಾರಿ ಶೇ.38 ರಷ್ಟು ಮತ ಗಳಿಗೆ ಯ ಪ್ರಮಾಣ ಏರಿಸಿ ಕೊಂಡಿದೆ.ಈ ಲೆಕ್ಕಾಚಾರದಲ್ಲೂ ಬಿಜೆಪಿ ಮುಂದಿನ ವಿಜಯೇೂತ್ಸವಕ್ಕೆ ಸಜ್ಜಾಗಿ ನಿಂತಿದೆ .
ಹಿಂದಿನ ಸಾಮ್ರಾಜ್ಯ ಅಧಿಪತಿಗಳಾದ ರಾಷ್ಟ್ರೀಯ ಪಕ್ಷಗಳನ್ನು ಸಂಪೂರ್ಣವಾಗಿ ಮಣಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ನಿಧಾನವಾಗಿ ಸ್ಥಳೀಯ ಪಕ್ಷವಾದ ತೃಣಮೂಲಕ್ಕೆ ಲಗ್ಗೆ ಹಾಕುವ ರಣ ತಂತ್ರ ದಲ್ಲಿ ಬಿಜೆಪಿ ಯಶಸ್ವಿಯಾಗಿದೆ ಅನ್ನುವುದು ಹಲವು ರಾಜಕೀಯ ಪಂಡಿತರ ಅಭಿಪ್ರಾಯಯೂ ಹೌದು.
ಅಂದರೆ ಬಿಜೆಪಿ ಅಥ೯ದಲ್ಲಿ ಅಲ್ಲಿ ಸೇೂತಿರುವುದು ಕಮ್ಯುನಿಸ್ಟ್ ಕಾಂಗ್ರೆಸ್..ಏಕೆಂದರೆ 2016ರಲ್ಲಿ ಈ ಎರಡೂ ಪಕ್ಷಗಳು ಗಳಿಸಿದ ಸೀಟುಗಳನ್ನು ಈ ಬಾರಿ ಬಿಜೆಪಿ ಗಳಿಸಿಕೊಂಡಿದೆ ಅಷ್ಟೇ ಸತ್ಯ.ಕೇರಳದಂತಹ ರಾಜ್ಯದಲ್ಲಿ ತಮ್ಮ ಬೇಳೆ ಬೇಯುವುದಿಲ್ಲ ಅನ್ನುವುದು ಗೊತ್ತಿದ್ದರೂ ಕೂಡಾ ಗೆಲುವು ಆಸೆಯನ್ನೇ ಮುಂದಿಟ್ಟು ಕೊಂಡು ನಿಧಾನವಾಗಿ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮುಂದುವರಿಸಿಕೊಂಡು ಬಿಜೆಪಿಯ ಇನ್ನೊಂದು ಅಸಾಧ್ಯವಾದ ಕಾಯ೯ತಂತ್ರವೂ ಹೌದು.
ತೀಮಾ೯ನ: ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ vs ಪ್ರಾದೇಶಿಕ ಪಕ್ಷ ಗಳು ಅನ್ನುವ ರಾಜಕೀಯ ವಾತಾವರಣ ಸೃಷ್ಟಿ ಯಾದರೂ ಆಶ್ಚರ್ಯವಿಲ್ಲ.ಬಿಜೆಪಿ ಯ ಇಂತಹ ಚುನಾವಣಾ ರಣತಂತ್ರ ಎದುರಿಸ ಬೇಕಾದರೆ ದೂರಗಾಮಿಯ ರಣ ತಂತ್ರವನ್ನು ಪ್ರತಿ ಪಕ್ಷಗಳು ರೂಪಿಸಿಕೊಂಡಾಗ ಮಾತ್ರ ಬಿಜೆಪಿಯ ನಾಗಾಲೇೂಟಕ್ಕೆ ಕಡಿವಾಣ ಹಾಕಬಹುದು.
ಲೇಖಕರು : ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ .ಉಡುಪಿ .