ಉಡುಪಿ: ಡಾ ಟಿಎಂಎ ಪೈ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಪುನಶ್ಚೇತನ ಶಿಬಿರ

ಉಡುಪಿ, ಮಾ.21 (ಉಡುಪಿ ಟೈಮ್ಸ್ ವರದಿ): ಡಾ ಟಿಎಂಎ ಪೈ ಆಸ್ಪತ್ರೆ, ಉಡುಪಿ ಸಮಗ್ರ ಪಾರ್ಶ್ವವಾಯು ಪುನಶ್ಚೇತನ ಮತ್ತು ಚೇತರಿಕೆ ಕೇಂದ್ರ, ಮಾಹೆ, ಮಣಿಪಾಲದ ಸಹಯೋಗದೊಂದಿಗೆ ಉಚಿತ ಪಾರ್ಶ್ವವಾಯು ಪುನಶ್ಚೇತನ ಶಿಬಿರವನ್ನು ಮಾ.23 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ರ ವರೆಗೆ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿಯ ಡಾ ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಶಶಿಕಿರಣ್ ಉಮಾಕಾಂತ್ ಅವರು ತಿಳಿಸಿದರು.

ಈ ಬಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಶಿಬಿರದಲ್ಲಿ ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ, ಮತ್ತು ವಾಕ್ ಮತ್ತು ಶ್ರವಣ ವಿಭಾಗಗಳಿಂದ ಪಾರ್ಶ್ವವಾಯುವಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಪ್ರಶ್ನೋತ್ತರ ಹಾಗೂ ಸ್ಟ್ರೋಕ್‌ಗೆ ಸಂಬಂಧಿಸಿದ ಸಮಸ್ಯೆಗಳ ತಪಾಸಣೆ ಮತ್ತು ಪುನಶ್ಚೇತನದ ಕುರಿತು ಮೌಲ್ಯಯುತವಾದ ವೈಯಕ್ತಿಕ ಸಲಹೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಫಿಸಿಯೋಥೆರಪಿ, ವಾಕ್ ಮತ್ತು ಶ್ರವಣ, ಹಾಗೂ ಆಕ್ಯುಪೇಷನಲ್ ಥೆರಪಿ ವಿಭಾಗದ ಸೇವೆಗಳು ನಿಯಮಿತವಾಗಿ ಎಲ್ಲಾ ಕೆಲಸದ ದಿನಗಳಲ್ಲಿ ಡಾ ಟಿಎಂಎ ಪೈ ಆಸ್ಪತ್ರೆ, ಉಡುಪಿಯಲ್ಲಿ ಲಭ್ಯವಿವೆ. ಈ ಪುನಶ್ಚೇತನ ಶಿಬಿರ ಹಾಗೂ ಕಾರ್ಯಕ್ರಮದ ಮಹತ್ವವನ್ನು ಒತ್ತಿ ಹೇಳಿ  ಪಾರ್ಶ್ವವಾಯು ಪೀಡಿತರು ಮತ್ತು ಆರೈಕೆ ಮಾಡುವವರು ಶಿಬಿರದಲ್ಲಿ ಲಭ್ಯವಿರುವ ಈ ಉಚಿತ ಸೇವೆಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿಕೊಂಡರು.

ಹಾಗೂ ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ 0820-2942164 ದೂ.ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಿದರು.

ಈ ವೇಳೆ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನ ಡೀನ್ ಡಾ. ಅರುಣ್ ಮಯ್ಯ, ಮತ್ತು ಸಿಸಿಎಸ್ಆರ್ಆರ್ ನ ಸಂಯೋಜಕರಾದ ಡಾ ಜಾನ್ ಸೊಲೊಮನ್ ಅವರು ಪಾರ್ಶ್ವವಾಯು ಚೇತರಿಕೆಗೆ ಈ ಪ್ರದೇಶದಲ್ಲಿಯೇ ಲಭ್ಯವಿರುವ ಅತ್ಯುತ್ತಮವಾದ ಆರೋಗ್ಯ ಸೇವೆಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದರು.

Leave a Reply

Your email address will not be published. Required fields are marked *

error: Content is protected !!