ಬೈಂದೂರು: ಹೆದ್ದಾರಿ ಬದಿ ನಿಲ್ಲಿಸಿದ್ದ ಟಿಪ್ಪರ್‌ಗಳ 5 ಬ್ಯಾಟರಿ ಕಳವು

ಬೈಂದೂರು ಮಾ.14(ಉಡುಪಿ ಟೈಮ್ಸ್ ವರದಿ): ರಾಷ್ಟ್ರೀಯ ಹೆದ್ದಾರಿ ಬದಿಯ ಪೆಟ್ರೋಲ್ ಬಂಕ್ ವೊಂದರ ಬಳಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗಳ 5 ಬ್ಯಾಟರಿ ಕಳ್ಳತನ ನಡೆಸಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಂದೂರಿನ ಯಡ್ತರೆ ಗ್ರಾಮದ ಕಿರಣ ಗ್ರಾಸ್ ಅವರು ತಮ್ಮ ಹಾಗೂ ತಮ್ಮ ತಾಯಿಯ ಮಾಲಕತ್ವದ  2 ಟಿಪ್ಪರ್ ಲಾರಿನ್ನು ವ್ಯವಹಾರ ಮುಗಿಸಿ     ಯಡ್ತರೆ ರಾ ಹೆ 66 ಬದಿಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದರು . ಹಾಗೂ ಇದೇ ಸ್ಥಳದಲ್ಲಿ ಸುಧಾಕರ ತಗ್ಗರ್ಸೆ ರವರಿಗೆ ಮತ್ತು ಸೀತಾರಾಮ ಪಡುವರಿ ರವರಿಗೆ ಸಂಬಂದಿಸಿದ ಟಿಪ್ಪರ್ ಲಾರಿಯನ್ನು ನಿಲ್ಲಿಸಿರುತ್ತಾರೆ. 

ನಿನ್ನೆ ಸಂಜೆಯಿಂದ ಇಂದು ಬೆಳಿಗ್ಗಿನ ಅವಧಿಯಲ್ಲಿ ಕಳ್ಳರು  ಯಡ್ತರೆ ಯಲ್ಲಿ ನಿಲ್ಲಿಸಿದ್ದ 4  ಟಿಪ್ಪರ್  ಒಟ್ಟು 65,500  ರೂ. ಮೌಲ್ಯದ  5   ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!