ಜೈ ಕುಂದಾಪ್ರ ಸೇವಾ ಟ್ರಸ್ಟ್‌ನ ನೂತನ ಕಚೇರಿ ಉದ್ಘಾಟನೆ

ಕುಂದಾಪುರ ಮಾ.12 (ಉಡುಪಿ ಟೈಮ್ಸ್ ವರದಿ) : ಜೈ  ಕುಂದಾಪ್ರ ಸೇವಾ ಟ್ರಸ್ಟ್ ಕುಂದಾಪುರ ಇದರ ನೂತನ ಕಚೇರಿ ಉದ್ಘಾಟನೆ, ಸಹಾಯ ಧನ ಹಸ್ತಾಂತರ ಮತ್ತು ಅಭಿನಂದನಾ ಕಾರ್ಯಕ್ರಮವು ಕೋಟೇಶ್ವರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಪತ್ರಕರ್ತೆ, ನಿರೂಪಕಿ ಜೇಸಿ ಸಂಸ್ಥೆಯ ಅಕ್ಷತಾ ಗಿರೀಶ್ ಅವರು ಮಾತನಾಡಿ, ‘ಸಮಾಜ ಸೇವೆ ನಾಡಿನ ಪ್ರತಿಯೋರ್ವ ನಾಗರಿಕನ ಕರ್ತವ್ಯವಾಗಬೇಕು. ಸಮಾಜದ ಋಣವನ್ನು ತೀರಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ. ಈ ನೆಲೆಯಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ ಕುಂದಾಪುರ ಮಾಡುತ್ತಿರುವ ಸಮಾಜ ಸೇವೆ ಪ್ರತಿಯೊಬ್ಬರಿಗೂ ಮಾದರಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಈ ವೇಳೆ ಕೊಟೇಶ್ವರದ ಮಿತ್ರ ಕ್ಲಿನಿಕ್ ನ ವೈದ್ಯರಾದ ಡಾ. ರಾಜೇಶ್  ಅವರು ಮಾತನಾಡಿ ‘ಕುಂದಾಪುರ ಪರಿಸರದಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ ಮಾಡುತ್ತಿರುವ ಕಾರ್ಯ ಇಂದಿನ ತಲೆಮಾರಿನ ತರುಣರಿಗೆ ಮಾರ್ಗದರ್ಶಕ. ನೂರಕ್ಕೂ ಜಾಸ್ತಿ ಯೋಜನೆಗಳನ್ನು ಹಮ್ಮಿಕೊಂಡ ಈ ಸಂಸ್ಥೆ ಅಭಿನಂದನೆಗೆ ಅರ್ಹ’ ಎಂದು ಹೇಳಿದರು.

ಇದೇ ವೇಳೆ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪುಂಡಲೀಕ ಮೊಗವೀರ್ ತೆಕ್ಕಟ್ಟೆ ಅವರು ಮಾತನಾಡಿ, ಜೈ ಕುಂದಾಪ್ರ ಸೇವಾ ಟ್ರಸ್ಟ್ ಕುಂದಾಪುರ ಇದುವರೆಗೆ ನೂರಕ್ಕೂ ಜಾಸ್ತಿ ಯೋಜನೆಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ. ಇಪ್ಪತ್ತು ಲಕ್ಷಕ್ಕೂ ಜಾಸ್ತಿ ಮೊತ್ತವನ್ನು ರೋಗಿಗಳಿಗೆ ನೀಡಲಾಗಿದೆ. ಸಮಾಜದ ದಾನಿಗಳಾದ ಸಹಕಾರದಿಂದ ಇನ್ನಷ್ಟು ಯೋಜನೆಗಳ ಮೂಲಕ ಅಶಕ್ತ ರೊಗಿಗಳಿಗೆ ನೆರವನ್ನು ನೀಡುವುದಕ್ಕೆ ನಮ್ಮಜೈ ಕುಂದಾಪ್ರ ಸಂಸ್ಥೆ ಬದ್ಧವಾಗಿದೆ ಎಂದು  ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುಮಾರಿ ಅಂಶು ಹಳ್ಳಿಹೊಳೆ, ಜನ್ಯ ನೇರಂಬಳ್ಳಿ, ಮತ್ತು ಸುಕನ್ಯಾ ಕೊರ್ಗಿ ಅವರಿಗೆ ಸಹಾಯ ಧನದ ಮೊತ್ತವನ್ನು ಚೆಕ್ ಮೂಲಕ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕಿ “ಚಾರ್ವಿ” , ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ, ಸಮಾಜ ಸೇವಕರಾದ ಸುರೇಂದ್ರ ಸಂಗಮ್ ಮತ್ತು ಕೋಟ ಸಂತು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ೨೦೨೪-೨೬ನೇ ಸಾಲಿಗೆ ನೂತನ ಪಧಾಧಿಕಾರಿಗಳಾಗಿ ಪಾಲ್ಗೊಂಡ ಜೈ ಕುಂದಾಪ್ರ ಸೇವಾ ಟ್ರಸ್ಟ್ ಕುಂದಾಪುರದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಜೈ ಕುಂದಾಪ್ರ ಸೇವಾ ಟ್ರಸ್ಟ್ ಕುಂದಾಪುರ ಇದರ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಪುಂಡಲಿಕ ಮೊಗವೀರ್ ತೆಕ್ಕಟ್ಟೆ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ದಿವ್ಯಾ ಕುಂದಾಪುರ ಧನ್ಯವಾದ ಸಮರ್ಪಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರದ ಗೋಡೆ ವಿಡಿಯೋ ಮತ್ತು ಸ್ಟುಡಿಯೋ ಮಾಲಕರಾದ ದಿನೇಶ್ ಗೋಡೆ, ಸಮಾಜ ಸೇವಕ ಮತ್ತು ಉದ್ಯಮಿಗಳಾದ ರಮೇಶ್ ಕುಲಾಲ್ ಹೆಂಗವಳ್ಳಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಸಾಯಿನಾಥ್ ಶೇಟ್,  ಸಮಾಜ ಸೇವಕ ರಾಕೇಶ್ ಶೆಟ್ಟಿ, ರಕ್ತದಾನಿ ಸುರೇಂದ್ರ ಸಂಗಮ್, ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರದ ಪಧಾದಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!