ಮಣಿಪಾಲದಲ್ಲಿ ಸೆಕ್ಯೂರಿಟಿಯಾಗಿದ್ದ ವ್ಯಕ್ತಿ ನಾಪತ್ತೆ
ಮಣಿಪಾಲ ಮಾ.12(ಉಡುಪಿ ಟೈಮ್ಸ್ ವರದಿ): ಮಣಿಪಾಲದಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಕೊಪ್ಪಳ ಜಿಲ್ಲೆಯ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಪ್ಪಳ ಮೂಲದ ಮಾರುತಿ ತಳವಾರ (27) ನಾಪತ್ತೆಯಾಗಿರುವವರು. ಮಣಿಪಾಲದಲ್ಲಿ ಸೆಕ್ಯುರಿಟಿ ಕಲೆಸ ಮಾಡಿಕೊಂಡಿದ್ದ ಇವರು, ಕೆಲಸ ಕಷ್ಟ ಆಗುತ್ತಿದೆ , ಕೆಲಸ ಬಿಡುವುದಾಗಿ ಹಾಗೂ ಬೇರೆ ಕಡೆ ಕೆಲಸ ಮಾಡುವುದಾಗಿ ತಮ್ಮ ಅಣ್ಣನ ಬಳಿ ಹೇಳುತ್ತಿದ್ದರು. ಆ ಬಳಿಕ 2023 ರ ಡಿ.8 ರಂದು ಮಧ್ಯಾಹ್ನದ ವೇಳೆ ತಾನು ವಾಸವಿದ್ದ ಬಾಡಿಗೆ ಮನೆಯಿಂದ ಹೋದವರು ಮನೆಯವರ ಫೋನ್ ಸಂಪರ್ಕಕ್ಕೆ ಸಿಗದೇ, ಸಂಬಂಧಿಕರ ಮನೆಗೂ ಹೋಗದೇ, ಬೇರೆ ಕಡೆ ಕೆಲಸಕ್ಕೂ ಹೋಗದೇ ಕಾಣೆಯಾಗಿದ್ದಾರೆ ಎಂಬುದಾಗಿ ನಾಪತ್ತೆಯಾಗಿರುವವರ ಅಣ್ಣ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.