ಹೆಬ್ರಿ: ಇಸ್ಪೀಟ್ ಅಡ್ಡೆಗೆ ದಾಳಿ : ಐದು ಮಂದಿ ವಶ

ಹೆಬ್ರಿ ಫೆ.28(ಉಡುಪಿ ಟೈಮ್ಸ್ ವರದಿ): ನಾಲ್ಕೂರು ಗ್ರಾಮದ ಮಡಿವಾಳಬೆಟ್ಟು ಎಂಬಲ್ಲಿನ ಸರಕಾರಿ ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ ಮಾಡಿದ ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಹೆಬ್ರಿ ಠಾಣಾ ಪೊಲೀಸರು  ಸ್ಥಳಕ್ಕೆ ದಾಳಿ ಮಾಡಿ ಆಟದಲ್ಲಿ ನಿರತರಾಗಿರುವ 5 ಜನರನ್ನು ವಶಕ್ಕೆ ಪಡೆದು ಅವರು ಆಟಕ್ಕೆ ಉಪಯೋಗಿಸಿದ ನಗದು 9,700/- ರೂ.ವನ್ನು  ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!