ಕರ್ವಾಲು ಶ್ರೀ ವಿಷ್ಣುಮೂರ್ತಿ ಸ್ನೇಹ ಬಳಗ ವತಿಯಿಂದ ಸರಕಾರಿ ಶಾಲೆಗೆ ಶಾಲಾ ವಾಹನ ಕೊಡುಗೆ
ಉಡುಪಿ ಫೆ.9 (ಉಡುಪಿ ಟೈಮ್ಸ್ ವರದಿ) : ಶ್ರೀ ವಿಷ್ಣುಮೂರ್ತಿ ಸ್ನೇಹ ಬಳಗ ಕರ್ವಾಲು ಇದರ ವತಿಯಿಂದ ಕರ್ವಾಲುವಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕೊಡ ಮಾಡಿದ ಶಾಲಾ ವಾಹನವನ್ನು ಇಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಶಾಲೆಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಶಾಲೆಗಳಿಗೆ ಇಂತಹ ದಾನಿಗಳ ಅವಶ್ಯಕತೆ ಇದೆ ಎಂದರು. ಹಾಗೂ ಸಮಾಜಮುಖಿ ಕಾರ್ಯಕ್ಕೆ ಮುಂದಾದ ಕರ್ವಾಲು ಶ್ರೀ ವಿಷ್ಣುಮೂರ್ತಿ ಸ್ನೇಹ ಬಳಗದವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ವಾಲು ಶ್ರೀ ವಿಷ್ಣುಮೂರ್ತಿ ಸ್ನೇಹ ಬಳಗದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಬೆಳ್ಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಶಿಧರ್ ವಾಗ್ಲೆ, ಮುಖ್ಯೋಪಾಧ್ಯಾಯರಾದ ಸವಿತಾ, ಶಿಕ್ಷಕವೃಂದ. ದಾನಿಗಳಾದ ಕ್ರಷ್ಣ ಕುಲಾಲ್ ವರ್ವಾಡಿ, ಸುಮನ ಸತೀಶ್ ಆಚಾರ್ಯ ಮರ್ಣೆ, ಗಣಪತಿ ಪಾಟ್ಕರ್, ಭಜನಾ ಮಂಡಳಿಯ ಅಧ್ಯಕ್ಷರಾದ ನಾಗರಾಜ್ ಆಚಾರ್ಯ, ಗುರುಕ್ರಪಾ ರಾವ್, ಸಂತೋಷ್, ರಾಮಚಂದ್ರ ನಾಯಕ್ ಮಣಿಪಾಲ, ಗೀತಾ ಸೇರಿಗಾರ್ ಸಂಘದ ಸದಸ್ಯರುಗಳಾದ ಮಹೇಂದ್ರ ಪ್ರಭು, ರಾಘವೇಂದ್ರ ಆಚಾರ್ಯ, ವಿಘ್ನೇಶ್ ನಾಯಕ್, ರೋಹಿತ್ ಪ್ರಭು, ರಾಘವೇಂದ್ರ, ಮಂಜ, ದಿನೇಶ್ ಪ್ರಭು, ,ಸುಬ್ಬು, ಶಾಲಾ ಅಧ್ಯಾಪಕಿ ಪ್ರಭಾವತಿ ಶೆಟ್ಟಿ ಉಪಸ್ಥಿತರಿದ್ದರು.