ಗಂಗೊಳ್ಳಿ: ಜುಗಾರಿ ಆಡುತ್ತಿದ್ದ ಓರ್ವ ವಶ

ಗಂಗೊಳ್ಳಿ ಫೆ.7 (ಉಡುಪಿ ಟೈಮ್ಸ್ ವರದಿ) : ಠಾಣಾ ವ್ಯಾಪ್ತಿಯ ಹಾಡಿಯಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ಮಾಡಿದ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಗಂಗೊಳ್ಳಿ ಠಾಣಾ ಪೊಲೀಸರು, ಸ್ಥಳಕ್ಕೆ ದಾಳಿ ಮಾಡಿ ಜುಗಾರಿ ಆಟ ನಡೆಸುತ್ತಿದ್ದ ಪ್ರಕಾಶ ಎಂಬಾತನನ್ನು ವಶಕ್ಕೆ ಪಡೆದು, ಆತನ ಬಳಿ ಇದ್ದ ಜುಗಾರಿ ಆಟಕ್ಕೆ ಬಳಸಿದ 1260 ರೂ. ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!