ಗಂಗೊಳ್ಳಿ: ಅಪರಿಚಿತ ವ್ಯಕ್ತಿ ನೇಣಿಗೆ ಶರಣು
ಗಂಗೊಳ್ಳಿ ಫೆ.7 (ಉಡುಪಿ ಟೈಮ್ಸ್ ವರದಿ) : ನಾಡಾ ಗ್ರಾಮದ ಬೆಳ್ಳಾಡಿ ಜೆಡ್ಡು ಎಂಬಲ್ಲಿನ ಸರ್ಕಾರಿ ಗೇರು ಪ್ಲಾಂಟೇಶನ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಮಾರು 55 ರಿಂದ 60 ವರ್ಷದ ಅಪರಿಚಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಆತನು ಯಾವುದೇ ಖಾಯಿಲೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದಾಗಿ ಪ್ರಭಾಕರ ಎಂಬವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.