ಮುಂಬಯಿ: ಪೊಲೀಸ್ ಅಧಿಕಾರಿ ದಯಾ ನಾಯಕ್‌ಗೆ ಭಡ್ತಿ

ಮುಂಬಯಿ, ಫೆ.2: ಕನ್ನಡಿಗರಾದ ದಯಾ ನಾಯಕ್ ಸಹಿತ ಮುಂಬಯಿ ಪೊಲೀಸ್ ಪಡೆಯ ಇತರ 22 ಇನ್ ಸ್ಪೆಕ್ಟರ್‌ಗಳಿಗೆ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಭಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಲಾಗಿದೆ.

ಕೈಂ ಬ್ರಾಂಚ್‌ನ 9ನೇ ಘಟಕದ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ದಯಾ ನಾಯಕ್ ಅವರಿಗೆ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಭಡ್ತಿ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ದಯಾ ನಾಯಕ್ ಅವರು 1995 ಬ್ಯಾಚ್‌ನ ಪೊಲೀಸ್ ಆಗಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಪ್ರಸಿದ್ದರು. ಇತ್ತೀಚಿನ ದಿನಗಳಲ್ಲಿ ಮುಂಬಯಿ ಸಹಿತ ಇನ್ನಿತರ ಭಾಗಗಳಲ್ಲಿ ಡ್ರಗ್ಸ್ ದಂಧೆ ಜಾಲವನ್ನು ಭೇದಿಸಿ ಕೋಟ್ಯಂತರ ರೂ. ಬೆಲೆ ಬಾಳುವ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳುವುದರೊಂದಿಗೆ ಹಲವು ಆರೋಪಿಗಳನ್ನು ಬಂಧಿಸುವಲ್ಲಿ ದಯಾ ನಾಯಕ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಹಿಂದೆ ಅವರು ಕೆಲವು ವರ್ಷಗಳ ಕಾಲ ಮಹಾರಾಷ್ಟ್ರದ ಭಯೋತ್ಪಾದನ ನಿಗ್ರಹ ದಳದಲ್ಲಿ (ಎಟಿಎಸ್) ಸೇವೆ ಸಲ್ಲಿಸಿ ಹಲವಾರು ಅಪರಾಧ ಪ್ರಕರಣಗಳನ್ನು ಬಯಲಿಗೆಳೆದ ಸಾಧನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!