ಉಡುಪಿ: ರಿಲಯನ್ಸ್ ಸ್ಮಾರ್ಟ್ ನಲ್ಲಿ ಕಿಡ್ಸ್ ಫ್ಯಾಷನ್ ಶೋ

ಉಡುಪಿ ಜು.27(ಉಡುಪಿ ಟೈಮ್ಸ್ ವರದಿ): ಮಮ್ಮಿ ಪೋಕೋ ಪ್ಯಾಂಟ್ಸ್ ನೇತೃತ್ವದಲ್ಲಿ ಕಿಡ್ಸ್ ಫ್ಯಾಷನ್ ಶೋ ಕಾರ್ಯಕ್ರಮ ಉಡುಪಿಯ ರಿಲಯನ್ಸ್ ಸ್ಮಾರ್ಟ್ ನಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು ಹಾಗೂ ಮಕ್ಕಳ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ. ದೇವರಿಗೆ ಪೂಜಿಸುವಂತೆ ಮಕ್ಕಳನ್ನು ಪೂಜೆಸೋದು ನಮ್ಮ ಕರ್ತವ್ಯ. ಮಕ್ಕಳನ್ನು ಪ್ರೀತಿಯಿಂದ ಗೆಲ್ಲುವ ಕಾರ್ಯವನ್ನು ನಾವು ಮಾಡಬೇಕು. ಜೊತೆಗೆ ಮಕ್ಕಳ ಆಸಕ್ತಿಗೆ ತಕ್ಕಂತೆ ಕಲಿಕೆಗೆ ಬೆಂಬಲ ನೀಡಿ ಪ್ರೀತಿಯಿಂದ ಬೆಳೆಸೋಣ ಎಂದು ತಾಯಿಯಂದಿರಿಗೆ ಕಿವಿ ಮಾತು ಹೇಳಿದರು.

ಈ ವೇಳೆ ತುಳು ಕೂಟದ ಸದಸ್ಯೆ ತಾರಾ ಉಮೇಶ್ ಆಚಾರ್ಯ ಅವರು ಮಾತನಾಡಿ, ಸತ್ಯ ಇರುವಲ್ಲಿ ದೇವರು ನೆಲೆಸಿರುತ್ತಾನೆ. ಸೌಂದರ್ಯ ಪ್ರಜ್ಞೆ ಸಣ್ಣ ಮಗುವಿನಿಂದ ಹಿಡಿದು ಹಿರಿಯರವರೆಗೂ ಇರುತ್ತದೆ. ಪ್ರತಿಯೊಬ್ಬ ತಾಯಿಗೂ ತನ್ನ ಮಗುವೇ ಅತ್ಯಂತ ಸುಂದರವಾದ ವಿಚಾರವಾಗಿರುತ್ತೆ ಎಂದು ಹೇಳಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!