ಮಂಡ್ಯ: ಹಾಸಿಗೆಗೆ ಆಕಸ್ಮಿಕ ಬೆಂಕಿ ತಂದೆ ಮಗ ಸಜೀವ ದಹನ

ಮಂಡ್ಯ: ಮಲಗಿದ್ದ ವೇಳೆ ಆಕಸ್ಮಿಕವಾಗಿ ಹಾಸಿಗೆಗೆ ಬೆಂಕಿ ಕಾಣಿಸಿಕೊಂಡು ತಂದೆ, ಮಗ ಇಬ್ಬರೂ ಸಜೀವ ದಹನವಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಹಾಸನ ನಿವಾಸಿ ದೀಪಕ್ (33) ಮತ್ತು ಆತನ ಮಗ ತನ್ವಿತ್ (4) ಮೃತಪಟ್ಟವರು.


ದೀಪಕ್ ಅವರು ಮಗು ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮನೆ ಮಾಲಿಕ ಭರತ್ ಎಂಬವರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!