ಜಾರಕಿಹೊಳಿ ಸಿಡಿಯಲ್ಲಿರುವ ಯುವತಿ ಸಿಕ್ಕರೆ ಪ್ರಕರಣಕ್ಕೆ ಅಂತ್ಯ ಸಿಕ್ಕಂತೆ : ಮುಖ್ಯ ಮಂತ್ರಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿ ಸಿಕ್ಕರೆ ಪ್ರಕರಣಕ್ಕೆ ಅಂತ್ಯ ದೊರೆಯಲಿದೆ ಎಂದು ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
    ಇಂದು (ಮಾ.23 ) ವಿಧಾನ ಸೌಧದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ತನಿಖೆ ನಡೆಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಸಿಡಿಯಲ್ಲಿರುವ ಆ ಹೆಣ್ಣುಮಗಳು ಸಿಕ್ಕಿದರೆ ಪ್ರಕರಣಕ್ಕೆ ಅಂತ್ಯ ದೊರೆಯಲಿದೆ. ಆದರೆ  ಅಧಿವೇಶನ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಸದಸ್ಯರು ಕುಂಟು ನೆಪ ಹೇಳಿ ಪ್ರತಿಭಟನೆ ಮಾಡ್ತಿದ್ದಾರೆ. ಬೇರೆ ವಿಚಾರ ಸಿಗದೆ ಇರೋದ್ರಿಂದ ಈ ವಿಚಾರ ಹಿಡಿದುಕೊಂಡು ಕಾಂಗ್ರೆಸ್ ನ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇದೇ ವೇಳೆ ಅವರು ನಿಮ್ಮೆಲ್ಲರ ಮಾತು ಕೇಳಿದ್ದೀನಿ. ಸುಸೂತ್ರವಾಗಿ ಕಲಾಪ ನಡೆಸಲು ಬಿಡಿ ಎಂದು ಕಾಂಗ್ರೆಸ್ ಸದಸ್ಯರಿಗೆ ಸಿಎಂ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!