ಜಾರಕಿಹೊಳೆ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ದಿನೇ ದಿನೇ ಹೊಸ ಹೊಸ ವಿಚಾರಗಳು ಬಹಿರಂಗಗೊಳ್ಳುತ್ತಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.


ಪ್ರಕರಣದ ಸಿಡಿಯಲ್ಲಿರುವ ಮಹಿಳೆಗೆ ಉತ್ತರ ಕರ್ನಾಟಕ ಮೂಲದ ಶಾಸಕ ರೊಬ್ಬರ ಜೊತೆ ಸುಮಾರು 4 ತಿಂಗಳು ಗಳಿಂದ ಸಂಪರ್ಕದಲ್ಲಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ತನಿಖೆಯಿಂದ ಈ ಸ್ಪೋಟಕ ಮಾಹಿತಿ ಬಹಿ ರಂಗವಾಗಿದೆ ಎನ್ನಲಾಗುತ್ತಿದು, ಶಾಸಕರು ಯುವತಿಯ ಪ್ರತಿ ನಡೆಯನ್ನು ಮತ್ತೂಂದು ಪಕ್ಷದ ಶಾಸಕರೊಬ್ಬರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ. ಆದರೆ, ಬಿಜೆಪಿಯ ಆ ಶಾಸಕ ಜಾರಕಿಹೊಳಿ ಸಹೋದರರ ಜೊತೆ ಗುರುತಿಸಿಕೊಂಡಿಲ್ಲ. ಅವರ ರಾಜಕೀಯ ವಿರೋಧಿ ಬಣದಲ್ಲಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಆ ಶಾಸಕರೊಬ್ಬರಿಗೆ ಸಿ.ಡಿ. ಹಿಂದಿನ ರಹಸ್ಯ ನಾಲ್ಕೈದು ತಿಂಗಳ ಹಿಂದೆಯೇ ಗೊತ್ತಿತ್ತು ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಯುವತಿಯ ಸಿಡಿಆರ್ ಶೋಧಿಸಿದಾಗ ಆ ಶಾಸಕರ ಮೊಬೈಲ್‍ಗೆ ನಿರಂತರವಾಗಿ ಕರೆಗಳು ಹೋಗಿರುವುದು ಪತ್ತೆಯಾಗಿದೆ. ಅಲ್ಲದೆ ಶಾಸಕನು ಯುವತಿಗೆ ವಾಟ್ಸ್ ಆಪ್ ಕಾಲ್‍ಗಳನ್ನು ಹೆಚ್ಚು ಮಾಡಿರುವುದು ತಿಳಿದು ಬಂದಿದೆ. ಯುವತಿಯಿಂದ ನರೇಶ್ ಗೌಡ ಹಾಗೂ ಶ್ರವಣ್‍ಗೂ ಕರೆಗಳು ಹೋಗಿರುವುದು ಗೊತ್ತಾಗಿದೆ. ಇದರೊಂದಿಗೆ ಸಿ.ಡಿ. ಪ್ರಕರಣದ ಶಂಕಿತ ಆರೋಪಿಗಳು ಆಗಾಗ ಸ್ಥಳ ಬದಲಾಯಿಸುತ್ತಿದ್ದಾರೆ ಎಂಬುದು ತನಿಖಾ ಧಿಕಾರಿಗಳಿಗೆ ತಿಳಿದು ಬಂದಿದೆ. ಪ್ರಕರಣದ ಕಿಂಗ್ ಪಿನ್‍ಗಳು ಎನ್ನಲಾದ ಇಬ್ಬರು ಪತ್ರಕರ್ತರು ಹಾಗೂ ಯುವತಿ ಗಂಟೆಗೊಮ್ಮೆ ಸ್ಥಳವನ್ನು ಬದಲಾಯಿ ಸುತ್ತಿದ್ದು, ಹೀಗಾಗಿ ಆರೋಪಿತರ ಪತ್ತೆ ಸಾಧ್ಯವಾಗುತ್ತಿಲ್ಲ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!