ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ ಕಡ್ಡಾಯ ತಪ್ಪಿದ್ದಲ್ಲಿ ದಂಡ ; ಸುಧಾಕರ್ ಖಡಕ್ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾದ ಬಳಿಕ ದಿನೆ ದಿನೇ ಪತ್ತೆಯಾಗುವ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಕೊರೋನಾ ನಿಯಂತ್ರಣಕ್ಕಾಗಿ ಸರಕಾರ ಹೊಸ ಮಾರ್ಗಸೂಚಿ ಪ್ರಕಟಿಸಿ ಕಟ್ಟುನಿಟ್ಟಿನಲ್ಲಿ ಪಾಲನೆ ಮಾಡುವಂತೆ ಸೂಚನೆ ನೀಡಿದೆ. ಅದರಂತೆ ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾಸ್ಕ್ ಹಾಕದಿದ್ರೇ ಕಡ್ಡಾಯವಾಗಿ ದಂಡವನ್ನು ತೆರಬೇಕಾಗುತ್ತದೆ.


ಕೊರೋನಾ ನಿಯಂತ್ರಣಕ್ಕಾಗಿ ತಾಂತ್ರಿಕ ತಜ್ಞರ ಸಮಿತಿಯು ಲಾಕ್ ಡೌನ್ ಅಂತ ತೀರ್ಮಾನ ಕೈಗೊಳ್ಳುವಂತೆಯೂ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಜೊತೆಗೆ ಶಾಲಾ-ಕಾಲೇಜು ಬಂದ್ ಮಾಡುವಂತೆಯೂ ಸೂಚಿಸಿದೆ ಎನ್ನಲಾಗಿದೆ. ಆದ್ರೇ ರಾಜ್ಯ ಸರ್ಕಾರ ಆ ಯಾವುದೇ ನಿಲುವು ತಳೆಯದೇ, ಕೊರೋನಾ ನಿಯಂತ್ರಣ ಕ್ರಮದ ಕಠಿಣ ನಿಯಮಗಳ ಜಾರಿಗೆ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕುವಂತೆ ಮತ್ತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖಡಕ್ ಸೂಚನೆ ನೀಡಿದ್ದಾರೆ. ಒಂದು ವೇಳೆ ಮಾಸ್ಕ್ ಧರಿಸದೇ ಇದ್ದರೇ ದಂಡ ಹಾಕಲಾಗುತ್ತದೆ ಎಂಬುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಹೀಗಾಗಿ ಸಾರ್ವಜನಿಕರು ಇನ್ಮುಂದೆ ಮಾಸ್ಕ್ ಧರಿಸೋದು ಮರೆತರೆ ದಂಡವನ್ನು ಕಟ್ಟಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!