ಟ್ರೇಡಿಂಗ್ ವ್ಯವಹಾರದ ಹೆಸರಲ್ಲಿ ವ್ಯಕ್ತಿಗೆ 4.20 ಲಕ್ಷ ರೂ.ವಂಚನೆ

ಉಡುಪಿ ಎ.19(ಉಡುಪಿ ಟೈಮ್ಸ್ ವರದಿ): ಟೆಲಿಗ್ರಾಮ್ ಆ್ಯಪ್ ನಲ್ಲಿ ಟ್ರೇಡಿಂಗ್ ವ್ಯವಹಾರ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 4.20 ಲಕ್ಷ ರೂ.ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿರುವ ಸಂದೀಪ ಎಂಬವರಿಗೆ ಎ.4 ರಂದು ಟೆಲಿಗ್ರಾಮ್ ಆ್ಯಪ್ ನಲ್ಲಿ ಟ್ರೇಡಿಂಗ್  ವ್ಯವಹಾರದ ಬಗ್ಗೆ ಸಂದೇಶ ಬಂದಿದ್ದು, ಈ ಸಂದೇಶದಲ್ಲಿ AMBLIN Entertainment ಎಂಬ ಸಂಸ್ಥೆ ಎಂದು ನಂಬಿಸಿ http://www.amblinfilmrating.com ಲಿಂಕ್ ಕಳುಹಿಸಿ ಅದಕ್ಕೆ ಹಣವನ್ನು ಜಮೆ ಮಾಡುವಂತೆ ಸೂಚಿಸಲಾಗಿತ್ತು. ಬಳಿಕ ಸಂದೀಪ ಅವರು ಜಮೆ ಮಾಡಿದ ಹಣ ವಾಪಸ್ಸು ಬಂದಿತ್ತು. ಇದನ್ನು ನಂಬಿದ ಅವರು ತಮ್ಮ ಖಾತೆಯಿಂದ ಎ.7 ರಿಂದ ಎ.13 ರ ವರೆಗೆ ಆರೋಪಿ ಸೂಚಿಸಿರುವ ಖಾತೆಗೆ 4,20,341 ಹಣವನ್ನು ವರ್ಗಾಯಿಸಿದ್ದರು. ಅದರಂತೆ ಈ ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಮ್ ಆ್ಯಪ್ ನಲ್ಲಿ ಟ್ರೇಂಡಿಂಗ್ ವ್ಯವಹಾರ ಎಂದು ನಂಬಿಸಿ ಒಟ್ಟು ರೂ. 4,20,341 ಹಣವನ್ನು ಆನ್ ಲೈನ್ ಮುಖೇನ ಪಡೆದು ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!