ಕುಂದಾಪುರ: ಗಾಂಜಾ ಸೇವನೆ- ಇಬ್ಬರು ವಶ

ಕುಂದಾಪುರ ಎ.17(ಉಡುಪಿ ಟೈಮ್ಸ್ ವರದಿ): ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಠಾಣಾ ಪೊಲೀಸರು ತಲ್ಲೂರ್ ಗ್ರಾಮದ ತಲ್ಲೂರ್ ಜಂಕ್ಷನ್ ಬಳಿ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಮೇರೆಗೆ ನೌಶದ್ ಎಂಬಾತನನ್ನು ಹಾಗೂ ತಲ್ಲೂರ್ ಗ್ರಾಮದ ಪ್ರವಾಸಿ ಬಾರ್ ಬಳಿ ಮಹಮ್ಮದ್‌ ಇರ್ಷಾದ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಈ ಇಬ್ಬರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಕಾರಣ ಇಬ್ಬರ ವಿರುದ್ಧ  ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!