ರಾಮ ಮಂದಿರ ಸಂಬಂಧಿಸಿ ವಾಟ್ಸಪ್ ಸ್ಟೇಟಸ್ ಪ್ರಕ್ರರಣ- ಅನ್ಯ ಕೋಮಿನ ಯುವಕರಿಂದ ಹಲ್ಲೆ
ಉಪ್ಪಿನಂಗಡಿ: ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸ್ಟೇಟಸ್ ಹಾಕಿದ ವಿಚಾರವಾಗಿ ಯುವಕನೋರ್ವನ ಮನೆಗೆ ಬಂದು ಹಲ್ಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆದರ್ಶನಗರದ ಮುಕುಂದ್ ಎಂಬವರು ತಮ್ಮ ವಾಟ್ಸಾಪ್ನಲ್ಲಿ ರಾಮ ಮಂದಿರ ವಿಚಾರಕ್ಕೆ ಸಂಬಂಧಿಸಿ ಸ್ಟೇಟಸ್ ಹಾಕಿದ್ದರು. ಈ ಸ್ಟೇಟಸ್ಗೆ ಉಬೈದ್ ಎಂಬಾತ ವಾಟ್ಸಾಪ್ ಮೂಲಕ ಪ್ರತಿಕ್ರಿಯೆ ನೀಡಿದ್ದಾನೆ ಎಂದು ಹೇಳಲಾಗಿದೆ. ಈ ವಿಚಾರದಲ್ಲೇ ಅವರಿಬ್ಬರ ನಡುವೆ ಚರ್ಚೆ ನಡೆದಿದೆ.
ಈ ವಿಚಾರವಾಗಿ ಮಾ.2 ರಂದು ಫರ್ಜೀನ್, ರಶೀದ್, ಉಬೈದ್ ಇದ್ದ ಯುವಕರ ಗುಂಪೊಂದು ಮುಕುಂದ್ ಮನೆಗೆ ಬಂದು ಹಲ್ಲೆ ನಡೆಸಲು ಯತ್ನಿಸಿದ್ದೂ ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡಾ ಆಗಿತ್ತು. ಇದೀಗ ಪ್ರಕರಣವನ್ನು ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣದ ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.