ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್!

ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಟ್ವಿಸ್ಟ್ ನೀಡಿದ್ದಾರೆ. ಈ ಕುರಿತಾಗಿ ಮೈಸೂರಿನಲ್ಲಿ ಮಾತನಾಡಿರುವ ಅವರು, ಈ ಕೇಸ್‍ನಲ್ಲಿ 5 ಕೊಟಿ ರೂಪಾಯಿಯ ಡೀಲ್ ನಡೆದಿದೆ. ಕಳೆದ ಮೂರು ತಿಂಗಳಿನಿಂದ ಡೀಲ್ ನಡೆದಿದ್ದು, ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಸಿಡಿ ಪ್ರಕರಣದ ಸರ್ಕಾರದ ತನಿಖೆಯಲ್ಲಿ ದೊಡ್ಡ ದೊಡ್ಡವರ ಹೆಸರು ಹೊರ ಬರಲಿದೆ ಎಂದು ಬಾಂಬ್ ಸಿಡಿಸಿದ್ದಾರೆ.

ಪ್ರಕರಣದ ಹಿಂದೆ ದೊಡ್ಡ ವ್ಯಕ್ತಿಗಳಿದ್ದಾರೆ ಎಂದ ಅವರು, ಅವನ ಬಳಿ ಸಿಡಿ ಹೇಗೆ ಬಂತು…? ಅವನೇ ಈ ವೀಡಿಯೋ ಮಾಡಿದ್ನಾ ಅನ್ನೋದು ಮೊದಲು ಗೊತ್ತಾಗಬೇಕಿದೆ. ಸರ್ಕಾರ ಮೊದಲು ಆ ವ್ಯಕ್ತಿಯನ್ನ ಬಂಧಿಸಿ ಪ್ರಕರಣದ ಮೂಲ ಪತ್ತೆ ಮಾಡಬೇಕಿದೆ. ಮೂರು ದಿನಗಳಿಂದ ಹರಿದಾಡುತ್ತಿರುವ ವೀಡಿಯೋದಲ್ಲಿ 5 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಬ್ಲ್ಯಾಕ್ ಮೇಲ್ ವ್ಯವಹಾರದಲ್ಲಿ ಕಪ್ಪು ಹಣ ಹರಿದಾಡುತ್ತಿದೆ ಎಂದು ಹೇಳಿದ್ದಾರೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವ್ಯಾಖ್ಯಾನ ಸಹ ನೀಡಲಾಗಿದೆ. ಆ ಮಂತ್ರಿಯ ರಾಜೀನಾಮೆ ಕೊಡಿಸೋದು ಈ ಪ್ರಕರಣದ ಮೂಲ ಉದ್ದೇಶವಾಗಿತ್ತು ಮತ್ತು ಅದರಲ್ಲಿ ಸಫಲರೂ ಆಗಿದ್ದಾರೆ. ಆ ಹೆಣ್ಮಗಳು ಮತ್ತು ಮೂಲ ಮಂತ್ರಿ ಇಬ್ಬರೇ ಸೇರಿಕೊಂಡು ಈ ವೀಡಿಯೋ ಮಾಡಿಕೊಂಡಿರೋದು ಕಾಣುತ್ತದೆ. ಸಿಡಿ ಇದೆ ಅಂತ ಹೇಳಿರುವ ವ್ಯಕ್ತಿಯನ್ನು ಮೊದಲು ಅರೆಸ್ಟ್ ಮಾಡಬೇಕು. ಯಾವನೋ ಮಾಧ್ಯಮಗಳ ಮುಂದೆ 4 ಸಿಡಿ ಇದೆ ಅಂತ ಹೇಳ್ತಾನೆ. ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡೋರು ಹೆಚ್ಚಾಗಿದ್ದಾರೆ. ಈ ರೀತಿ ಸಿಡಿ ಇಟ್ಕೊಂಡು ರಾಜಕಾರಣ ಮಾಡೋದು ಒಳ್ಳೆಯದಲ್ಲ. ಹಾಗಾಗಿ ಸಿಡಿ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡೋರನ್ನ ಮೊದಲು ಬಂಧಿಸಬೇಕಿದೆ ಎಂದು ಆಗ್ರಹಿಸಿದರು. 

Leave a Reply

Your email address will not be published. Required fields are marked *

error: Content is protected !!