ಉಡುಪಿ: ಮಾ.9ರಂದು ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಷಷ್ಠ್ಯಬ್ದ ಸಂಭ್ರಮ

ಉಡುಪಿ: ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನದ  ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಆಚರಣೆಯ ಪ್ರಯುಕ್ತ ಮಾರ್ಚ್ 9 ರಂದು “ಜ್ಞಾನ ವಾಹಿನಿ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಉಪಾಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಾರ್ಚ್ 9 ರಂದು ಮಧ್ಯಾಹ್ನ 2.00 ಗಂಟೆಯಿಂದ ಪರ್ಕಳ ಶ್ರೀ ಸುರಕ್ಷಾ ಸಭಾ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಒಡಿಯೂರು ಶ್ರೀಗಳು ಚಾಲನೆ ನೀಡಲಿದ್ದಾರೆ.

ಶ್ರೀಗಳ ಷಷ್ಟ್ಯಬ್ಬ ಸಂಭ್ರಮದ ಅಂಗವಾಗಿ ನಡೆಯಲಿರುವ ಜ್ಞಾನ ವಾಹಿನಿ ಕಾರ್ಯಕ್ರಮದಲ್ಲಿ, 60 ಮನೆಗಳಲ್ಲಿ ಮನೆ ಮನೆ ಭಜನೆ, 60 ಮನೆ ಸತ್ಸಂಗ, ಹನುಮಾನ್ ಚಾಲೀಸ್ ಪಠಣ, 60 ಮನೆಗಳಿಗೆ ಮನೆಗೊಂದು ಗಂಧದ ಗಿಡ, 60 ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕೊಡುಗೆ, 60 ಜನ ಜಾಗೃತಿ ಸಮಾಜಮುಖಿ ಮಾಹಿತಿ ಶಿಬಿರಗಳು, 60 ಮಂದಿಗೆ ತುಳುಲಿಪಿ ಬರಹ ಕಾರ್ಯಾಗಾರ, 60 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ, 60 ವಿಕಲಚೇತನ ಮಕ್ಕಳ ಸಾಧನಾಶೀಲ ಪೋಷಕರ ಗುರುತಿಸುವಿಕೆ, ಗ್ರಾಮೀಣ ಕ್ರೀಡಾಕೂಟ ಮತ್ತು ಭಜನಾ ಸಮಾವೇಶ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಮಿತಿ ಹಮ್ಮಿಕೊಂಡಿದೆ.

ಈ ಸಮಾರಂಭದಲ್ಲಿ  ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಸಂಚಾಲಿತ, ಒಡಿಯೂರು ಶ್ರೀರಾಮ ವಿಕಾಸ ಯೋಜನ, ಉಡುಪಿ ವಲಯದ 12 ಘಟ ಸಮಿತಿ, ಒಡಿಯೂರು ಶ್ರೀಗುರುದೇವ ಸೇವಾ ಬಳಗ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪದಪ್ರದಾನ ಸಮಾರಂಭವು ನಡೆಯಲಿದೆ.

ಇನ್ನು ಈ ಕಾರ್ಯಕ್ರಮದ ಸಲುವಾಗಿ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಉಡುಪಿಯಲ್ಲಿ ಕೂಡಾ ಹಬ್ಬ ಸಮಿತಿ ರಚಿಸಲಾಗಿದೆ. ಉಡುಪಿ ಷಷ್ಠ್ಯಬ್ದ ಸಮಿತಿಯ ಗೌರವಾಧ್ಯಕ್ಷರಾಗಿ ನಾಡೋಜ ಡಾ. ಜಿ. ಶಂಕರ್, ಅಧ್ಯಕ್ಷರಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕಾರ್ಯಾಧ್ಯಕ್ಷರಾಗಿ ಕಡಂದಲೆ ಸುರೇಶ್ ಭಂಡಾರಿ, ಉಪಾಧ್ಯಕ್ಷರಾಗಿ ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಥಾನ ಕಾರ್ಯದರ್ಶಿಯಾಗಿ ಕೆ. ಪ್ರಭಾಕರ್ ಶೆಟ್ಟಿ ಕಬ್ಯಾಡಿ, ಕೋಶಾಧಿಕಾರಿ ಅಮಿತಾ ಗಿರೀಶ್, ಜೊತೆ ಕಾರ್ಯದರ್ಶಿಗಳಾಗಿ ಚಂದ್ರಿಕಾ ಪ್ರಕಾಶ್, ಯಶೋಧ ಕೇಶವ್, ಸಂಘಟನಾ ಕಾರ್ಯದರ್ಶಿಯಾಗಿ ಲಕ್ಷ್ಮಣ್ ಮೈಂದನ್, ಬೈಲಕೆರೆ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!