ಸಿದ್ದರಾಮಯ್ಯ ಅವರಿಂದ ಅಭಿಮಾನಿಗೆ ಕಪಾಳ ಮೋಕ್ಷ!!

ಬೆಂಗಳೂರು ಮಾ.24: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು
ತಮ್ಮ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ.

ನಡೆದಿದ್ದಿಷ್ಟು….
ದಾವಣಗೆರೆಯ ಹರಿಹರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ರಾಮಪ್ಪ ಸ್ಪರ್ಧಿಸಲು ಮುಂದಾಗಿದ್ದಾರೆ. ಇದಕ್ಕಾಗಿ ರಾಮಪ್ಪ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಸುತ್ತುವರೆದು ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ರಾಮಪ್ಪ ಅವರಿಗೆ ಸ್ಪಷ್ಟನೆ ನೀಡಿದ್ದು ಕಾಯುವಂತೆ ಸೂಚಿಸಿದ್ದರು. ಆದರೆ ಸಿದ್ದರಾಮಯ್ಯ ಅವರ ಮನೆ ಮುಂದೆ ರಾಮಪ್ಪ ಬೆಂಬಲಿಗರು ಟಿಕೆಟ್ ನೀಡಲು ಒತ್ತಾಯಿಸಲು ಆರಂಭಿಸಿದ್ದರು. ಈ ವೇಳೆ ಜನಸಂದಣಿ ನಡುವೆ ಸಿದ್ದರಾಮಯ್ಯ ಅವರು ಹೊರಡುವಾಗ ತಳ್ಳಾಟ ನೂಕಾಟವಾಗಿದ್ದು, ಸಿಟ್ಟಿನಿಂದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!