ಕೋವಿಡ್ ವೇಳೆ ಬಿಡುಗಡೆಯಾಗಿದ್ದ ಖೈದಿಗಳು 15 ದಿನಗಳೊಳಗೆ ಶರಣಾಗಬೇಕು-ಸುಪ್ರೀಂ ಕೋರ್ಟ್

ನವದೆಹಲಿ ಮಾ.24 : ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಜೈಲಿನಲ್ಲಿ ದಟ್ಟಣೆ ತಪ್ಪಿಸಲು ಬಿಡುಗಡೆ ಮಾಡಿದ್ದ ಎಲ್ಲ ವಿಚಾರಣಾಧೀನ ಕೈದಿಗಳು 15 ದಿನಗಳೊಳಗೆ ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಗಂಭೀರವಲ್ಲದ ಅಪರಾಧಗಳಿಗೆ ಸಂಬಂಧಿಸಿ ಬಂಧಿತರಾಗಿದ್ದವರನ್ನು ಕೋವಿಡ್ ಸಂದರ್ಭದಲ್ಲಿ ಜೈಲಿನಲ್ಲಿ ದಟ್ಟಣೆ ತಪ್ಪಿಸಲು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚನೆಯಾಗಿದ್ದ ಉನ್ನತಾಧಿಕಾರ ಸಮಿತಿ ಸಲಹೆ ಆಧರಿಸಿ ಬಿಡುಗಡೆ ಮಾಡಲಾಗಿತ್ತು. ಇದೀಗ ಈ ಆರೋಪಿಗಳು ಮತ್ತೆ ಕೋರ್ಟ್ ಗೆ ಶರಣಾಗುವಂತೆ ಸೂಚನೆ ನೀಡಲಾಗಿದೆ.

ಈ ಬಗ್ಗೆ ಆದೇಶ ನೀಡಿರುವ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು, ತುರ್ತು ಜಾಮೀನಿನಡಿ ಬಿಡುಗಡೆ ಆದವರು ಶರಣಾಗತಿಯ ಬಳಿಕ ಜಾಮೀನು ಕೋರಿ ಸಕ್ಷಮ ಕೋರ್ಟ್‍ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!