ಕಾಂತಾರ 2 ಬರವಣಿಗೆ ಆರಂಭ

ಬೆಂಗಳೂರು ಮಾ.23 : ಕಾಂತಾರ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಂತೆ ಎಲ್ಲರೂ ಕೇಳುತ್ತಿದ್ದ ಒಂದೇ ಪ್ರಶ್ನೆ ಕಾಂತಾರ 2 ಯಾವಾಗ ಎಂದು ಇದೀಗ ಪ್ರೇಕ್ಷರ ಈ ಪ್ರಶ್ನೆಗೆ ಕೊನೆಗೂ ಹೊಂಬಾಳೆ ಉತ್ತರ ನೀಡಿದೆ.

ಕಾಂತಾರ ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ ಅವರು ಕಾಂತಾರ ಸೆಕೆಂಡ್ ಪಾರ್ಟ್ ಬರಲಿದ್ದು ಬರವಣಿಗೆ (ಸ್ಕ್ರಿಪ್ಟ್) ಆರಂಭವಾಗಿದೆ ಎಂದು ಖಚಿತಪಡಿಸಿದೆ. ಯುಗಾದಿ ದಿನ ಈ ಕುರಿತು ಟ್ವಿಟ್ ಮಾಡಿರುವ ಹೊಂಬಾಳೆ ಫಿಲ್ಮ್, ನಾವು ಹೊಸ ವರ್ಷ ಯುಗಾದಿಯ ಈ ಸಂಭ್ರಮದಲ್ಲಿ ಕಾಂತಾರ ಪಾರ್ಟ್ 2 ಸಿನಿಮಾಕ್ಕೆ ಬರವಣಿಗೆ ಆರಂಭವಾಗಿದೆ ಎಂದು ತಿಳಿಸಲು ಹರ್ಷವಾಗುತ್ತದೆ. ಪೃಕೃತಿ ಮಾನವ ಸಂಘರ್ಷದ ಕಥೆಯನ್ನು ಮತ್ತೊಂದು ರೂಪದಲ್ಲಿ ಹೊತ್ತು ತರಲಿದ್ದೇವೆ ಎಂದು ತಿಳಿಸಿದೆ.

ಕಾಂತಾರ ಪಾರ್ಟ್ 2 ಸಿನಿಮಾದ ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಆದರೆ ಈ ಚಿತ್ರವನ್ನು ಬರೆದು, ನಟಿಸಿ ನಿರ್ದೇಶಿಸಲಿದ್ದಾರೆ ರಿಷಬ್ ಶೆಟ್ಟಿ, ಅಷ್ಟೇ ಅಲ್ಲದೇ ನಿರ್ಮಾಪಕರು ಕಾಂತಾರ ಚಿತ್ರವನ್ನು ಇಟಾಲಿಯನ್ ಹಾಗೂ ಸ್ಪ್ಯಾನಿಶ್ ಭಾಷೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!