ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:6 ಜನ ಅರೆಸ್ಟ್, 100 ಎಫ್‌ಐಆರ್‌

ನವದೆಹಲಿ ಮಾ.22 : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದದ ಪೋಸ್ಟರ್‌ ಗಳಿಗೆ ಸಂಬಂಧಿಸಿದಂತೆ 36 ಎಫ್‌ಐಆರ್‌ಗಳನ್ನು ಮಾಡಲಾಗಿದೆ. ಉಳಿದಂತೆ ಎಲ್ಲಾ ಎಫ್‌ಐಆರ್‌ಗಳು ಇತರ ಪೋಸ್ಟರ್‌ಗಳಿಗೆ ಸಂಬಂಧಿಸಿವೆ.

ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು 100 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಪೋಸ್ಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈ ಪೋಸ್ಟರ್ ಗಳಲ್ಲಿ ಪ್ರಿಂಟಿಂಗ್ ಪ್ರೆಸ್‌ನ ವಿವರಗಳಿರಲಿಲ್ಲ. ಪ್ರಿಂಟಿಂಗ್ ಪ್ರೆಸ್ ಆಕ್ಟ್ ಮತ್ತು ಆಸ್ತಿ ವಿರೂಪಗೊಳಿಸುವಿಕೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಎರಡು ಪ್ರಿಂಟಿಂಗ್ ಪ್ರೆಸ್‌ಗಳಿಗೆ ಇಂತಹ ಒಂದು ಲಕ್ಷ ಪೋಸ್ಟರ್‌ಗಳಿಗೆ ಆರ್ಡರ್ ನೀಡಲಾಗಿದೆ ಎಂದು ತಿಳಿದು ಬಂದಿದ್ದು,ಎಎಪಿ ಕಚೇರಿಯಿಂದ ಹೊರಟ ತಕ್ಷಣ ವ್ಯಾನ್ ಒಂದನ್ನು ಅಡ್ಡಗಟ್ಟಲಾಗಿದ್ದು ಕೆಲವು ಪೋಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವಿಶೇಷ ಸಿಪಿ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ.

ಮೋದಿ ವಿರೋಧಿ ಪೋಸ್ಟರ್‌ಗಳ ವಿರುದ್ಧದ ಕ್ರಮಕ್ಕೆ ಪ್ರತಿಕ್ರಿಯಿಸಿದ ಎಎಪಿ, ಕೇಂದ್ರ ಸರ್ಕಾರವನ್ನು “ಸರ್ವಾಧಿಕಾರ” ಎಂದು ಆರೋಪಿಸಿದೆ ಮತ್ತು ಪೋಸ್ಟರ್‌ಗಳ ಬಗ್ಗೆ ಆಕ್ಷೇಪಣೆ ಏನು ಎಂದು ಕೇಳಿದೆ. ಹಾಗೂ ಈ ಬಗ್ಗೆ ಟ್ವೀಟ್ ಮಾಡಿ, “ಮೋದಿ ಸರ್ಕಾರದ ಸರ್ವಾಧಿಕಾರವು ಉತ್ತುಂಗದಲ್ಲಿದೆ. ಈ ಪೋಸ್ಟರ್‌ನಲ್ಲಿ ಮೋದಿಜಿ 100 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ, ಆಕ್ಷೇಪಾರ್ಹವಾದುದು ಏನು? ಪ್ರಧಾನಿ ಮೋದಿಯವರೇ, ನಿಮಗೆ ಬಹುಶಃ ತಿಳಿದಿಲ್ಲ, ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಒಂದು ಪೋಸ್ಟರ್‌ಗೆ ತುಂಬಾ ಹೆದರುತ್ತಿದೆ! ಏಕೆ” ಎಂದು ಟೀಕಿಸಿದೆ.

Leave a Reply

Your email address will not be published. Required fields are marked *

error: Content is protected !!