ಪಾಕಿಸ್ತಾನದಲ್ಲಿ ಪ್ರಭಲ ಭೂಕಂಪ: 9 ಸಾವು, 150 ಕ್ಕೂ ಅಧಿಕ ಮಂದಿಗೆ ಗಾಯ

ಇಸ್ಲಾಮಾಬಾದ್ ಮಾ.22 : ಪಾಕಿಸ್ತಾನದಲ್ಲಿ  ಹಲವೆಡೆ ಪ್ರಬಲ ಭೂಕಂಪ ಸಂಭವಿಸಿ 9 ಜನರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ನಿನ್ನೆ ರಾಜಧಾನಿ ಇಸ್ಲಾಮಾಬಾದ್​​ , ಲಾಹೋರ್, ಪೇಶಾವರ, ರಾವಲ್ಪಿಂಡಿ ಸೇರಿ ಹಲವು ನಗರಗಳಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ. ಭೂಮಿಯ 180 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟೆರ್​ ಮಾಪಕದಲ್ಲಿ ತೀರ್ವತೆ 6.8ರಷ್ಟಿದೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನ ಹೊರತಾಗಿ, ಭಾರತ, ಅಫ್ಘಾನಿಸ್ತಾನ, ತುರ್ಕಮೆನಿಸ್ತಾನ್, ಕಜಕಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ ಮತ್ತು ಕಿರ್ಗಿಸ್ತಾನ್‌ನಲ್ಲಿಯೂ ಕಂಪನದ ಅನುಭವವಾಗಿದೆ ಅಂತರಾಷ್ಟ್ರೀಯ ಭೂಕಂಪನ ಕೇಂದ್ರ ಹೇಳಿದೆ.

ಇನ್ನು ಗುಜ್ರಾನ್‌ವಾಲಾ, ಗುಜರಾತ್‌, ಸಿಯಾಲ್‌ಕೋಟ್‌, ಕೋಟ್‌ ಮೊಮಿನ್‌, ಮಧ್‌ ರಂಝಾ, ಚಕ್ವಾಲ್‌, ಕೊಹತ್‌ ಮತ್ತು ಗಿಲ್ಗಿಟ್‌-ಬಾಲ್ಟಿಸ್ತಾನ್‌ ಪ್ರದೇಶಗಳಲ್ಲಿಯೂ ಪ್ರಬಲ ಕಂಪನ ಸಂಭವಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಂಪನದಿಂದ ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿದ್ದಾರೆ. ಸ್ವಾತ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರೇ ಮತ್ತು 150 ಮಂದಿ ಗಾಯಗೊಂಡಿದ್ದಾರೆ, ಅವರನ್ನು ಚಿಕಿತ್ಸೆಗಾಗಿ ಸೈದು ಬೋಧನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭೂಕಂಪದ ಸಮಯದಲ್ಲಿ, ರಾವಲ್ಪಿಂಡಿಯ ಮಾರುಕಟ್ಟೆಗಳಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಮಾಧ್ಯಮ ವರದಿಯಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!