ಆರೋಗ್ಯದಲ್ಲಿ ಚೇತರಿಕೆ ನಟ ರಾಘವೇಂದ್ರ ರಾಜಕುಮಾರ್ ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ನಟ, ರಾಘವೇಂದ್ರ ರಾಜ್‍ಕುಮಾರ್ ಅವರು ಇಂದು (ಫೆ17) ಡಿಸ್ಚಾರ್ಚ್ ಆಗಲಿದ್ದಾರೆ. ಫೆ.16 ರಂದು ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಆಯಾಸ ಉಂಟಾಗಿ, ಅನಾರೋಗ್ಯ ಕಂಡುಬಂದಿತ್ತು, ಹಾಗಾಗಿ ಕೂಡಲೇ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ನೀರಸ ಉಂಟಾಗಿತ್ತು,

ಎದೆ ಬಡಿತ ಜೋರಾಗಿತ್ತು, ಹಾಗಾಗಿ ಅವರನ್ನು ನಿಘಾದಲ್ಲಿ ಇಡಲಾಗಿತ್ತು ಎಂದು ವೈದ್ಯರು ಹೇಳಿದ್ದರು. ಇದೀಗ ರಾಘವೇಂದ್ರ ರಾಜ್‍ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!