ಮಗನ ಟಿಕೆಟ್ ಬಳಸಿ ವಿಮಾನ ಪ್ರಯಾಣಕ್ಕೆ ಯತ್ನ- ವ್ಯಕ್ತಿಯ ಬಂಧನ

ಬೆಂಗಳೂರು: ತನ್ನ ಮಗನ ಹೆಸರಲ್ಲಿದ್ದ ಟಿಕೆಟ್ ನಲ್ಲಿ ತಾನು ಕೊಚ್ಚಿನ್ ಗೆ ತೆರಳಲು ಯತ್ನಿಸಿದ್ದ ವ್ಯಕ್ತಿಯನ್ನು ಸೋಮವಾರ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸಿಐಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ.ಹದಿನೈದು ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ನಡೆದ ಇಂತಹಾ ಎರಡನೇ ಪ್ರಕರಣ ಇದಾಗಿದೆ.

ಬೆಳಿಗ್ಗೆ 8 ಗಂಟೆಯ ಮೊದಲು ಅಬ್ದುಲ್ ಕಲಾಂ ಮೊಂದಾಲ್ ಏರ್ ಏಷ್ಯಾ ವಿಮಾನ (ಐ 5-1983) ಏರಲು ಸಿದ್ದವಾಗಿದ್ದು ವಿಮಾನವು ಬೆಳಿಗ್ಗೆ 9.05 ಕ್ಕೆ ಹೊರಡುವುದಿತ್ತು. ಸಿಐಎಸ್ಎಫ್ ಅಧಿಕಾರಿ ಪ್ರಯಾಣಿಕರ ಟಿಕೆಟ್ ಮತ್ತು ಆಧಾರ್ ಕಾರ್ಡ್ ಪರಿಶೀಲಿಸಿದಾಗ ಶಂಕೆ ವ್ಯಕ್ತವಾಗಿದೆ.

ಆಧಾರ್ ಕಾರ್ಡ್ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಸೋನಾತಿಕುರಿ ಎಂಬ ವಿಳಾಸ ಹೊಂದಿದೆ. ಅಲ್ಲದೆ ಅದು ‘ಇದ್ರೀಶ್ ಮೊಂದಾಲ್ ಹೆಸರಿನಲ್ಲಿತ್ತು. ” ಆದರೆ ಪ್ರಯಾಣ ದಾಖಲೆಗಳು ಹಾಗೂ ಆಧಾರ್ ನಲ್ಲಿ ಕೆಲ ವ್ಯಸ್ತಾಸಗಳಿದ್ದವು. ಅಬ್ದುಲ್ ಅವರನ್ನು ಈ ಬಗ್ಗೆ ಸ್ಪಷ್ಟತೆ ಕೇಳಿದಾಗ ತಕ್ಷಣವೇ ಅವರ ನಿಜವಾದ ಹೆಸರಿನಲ್ಲಿ ಮತ್ತೊಂದು ಆಧಾರ್ ಕಾರ್ಡ್ ಅನ್ನು ತೋರಿಸಿದ್ದಾರೆ. ಅಲ್ಲದೆ ತಾನು ಇದ್ರಿಶ್ ಅವರ ತಂದೆ ಎಂದು ಹೇಳಿದ್ದಾನೆ.“ಎರಡೂ ಆಧಾರ್ ಕಾರ್ಡ್‌ಗಳಲ್ಲಿ ಅಬ್ದುಲ್ ಅವರ ಫೋಟೋ ವಿಭಿನ್ನ ಹೆಸರುಗಳೊಂದಿಗೆ ಇದ್ದು, ಇದು ಅನುಮಾನಕ್ಕೆ ಎಡೆ ಮಾಡಿದೆ.”

ಹೆಚ್ಚಿನ ವಿಚಾರಣೆಯಲ್ಲಿ, ಪ್ರಯಾಣಿಕನು ತನ್ನ ಮಗನ ಹೆಸರಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದಾಗಿ ಹೇಳಿದ್ದು ಅವನು ತನ್ನ ಮಗನ ಕಾರ್ಡ್ ಅನ್ನು ಸಂಪಾದಿಸುವ ಮೂಲಕ ಆತನ ಹೆಸರಲ್ಲಿ ಪ್ರಯಾಣ ಬೆಳೆಸಲು ನಿರ್ಧರಿಸಿದ್ದಾಗಿ ತಿಳಿದುಬಂದಿದೆ. ಸಧ್ಯ ಅನುಮಾನಾಸ್ಪದ ವ್ಯಕ್ತಿಯನ್ನು ಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.  

Leave a Reply

Your email address will not be published. Required fields are marked *

error: Content is protected !!