ಕಾರಿನೊಳಗೆ ನುಗ್ಗಿದ ಅಲ್ಯೂಮಿನಿಯಂ ಸ್ಟ್ರಿಪ್‌ಗಳು-ಚಾಲಕ ಪಾರು

ಮಂಗಳೂರು, ಫೆ.23: ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ  ಅಲ್ಯೂಮಿನಿಯಂ ಸ್ಟ್ರಿಪ್‌ಗಳು ಜಾರಿ ಕಾರಿಗೆ ನುಗ್ಗಿದ ಘಟನೆ ನಿನ್ನೆ ನಂತೂರು ಜಂಕ್ಷನ್‌ನಲ್ಲಿ ನಡೆದಿದೆ.

ಅವಘಡದಲ್ಲಿ ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಯೂಮಿನಿಯಂ ಪಟ್ಟಿಗಳನ್ನು ಹೊತ್ತ ಪಿಕಪ್ ಕಾರಿನ ಹಿಂದೆ ಇತ್ತು. ಎರಡೂ ವಾಹನಗಳು ಕೆಪಿಟಿಯಿಂದ ಪಂಪ್‌ವೆಲ್ ಕಡೆಗೆ ಚಲಿಸುತ್ತಿದ್ದವು. ನಂತೂರು ಜಂಕ್ಷನ್‌ನಲ್ಲಿ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದಾಗ, ಪಿಕಪ್‌ ನಿಂದ ಚಾಚಿಕೊಂಡಿದ್ದ ಅಲ್ಯೂಮಿನಿಯಂ ಪಟ್ಟಿಗಳು ಹಿಂದಿನ ವಿಂಡ್‌ಶೀಲ್ಡ್‌ನಿಂದ ಕಾರಿನೊಳಗೆ ಪ್ರವೇಶಿಸಿದೆ. ಈ ವೇಳೆ ಕಾರು ಸಂಪೂರ್ಣ ಜಖಂಗೊಂಡಿದೆ. 

ಇದೀಗ ಘಟನೆಗೆ ಸಂಬಂಧಿಸಿ ಪಿಕಪ್ ಚಾಲಕನ ವಿರುದ್ಧ ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯದ ಚಾಲನೆಯ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!