ಮಣಿಪಾಲ: ನೇಣು ಬೀಗಿದ ಸ್ಥಿತಿಯಲ್ಲಿ ಪ್ರೊಫೆಸರ್ ಮೃತ ದೇಹ ಪತ್ತೆ

ಮಣಿಪಾಲ, ಫೆ.22: ದಶರಥ ನಗರ ಇಲ್ಲಿಯ ಖಾಸಗಿ ವಸತಿಗೃಹದ ನಾಲ್ಕನೇ ಮಹಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪ್ರೊಫೆಸರ್ ಒರ್ವರ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ.

ಪ್ರೊಫೆಸರ್ ಮೃತಪಟ್ಟು ನಾಲ್ಕು ದಿನ ಕಳೆದಿರ ಬಹುದೆಂದು ಅಂದಾಜಿಸಲಾಗಿದೆ. ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ ಉತ್ತರಪ್ರದೇಶದ ಅಹಮದ್‌ ಮಿರ್ಜಾ (38) ಮಣಿಪಾಲದ ಆರ್ಕಿಟೆಕ್ ಕಾಲೇಜಿನಲ್ಲಿ ಪ್ರೋಪೆಸರ್ ಆಗಿದ್ದರೆಂದು ತಿಳಿದು ಬಂದಿದೆ.

ಎಸ್ ಐ ನವೀನ್ ನಾಯ್ಕ, ಸುಕುಮಾರ್ ಹೆಡ್ ಕಾನ್ಸೆಬಲ್, ಉಮೇಶ್ ಕಾನ್ಸ್ಟಬಲ್ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರೀಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕೊಳೆತ ಕಳೇಬರವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.

Leave a Reply

Your email address will not be published. Required fields are marked *

error: Content is protected !!