ಉಡುಪಿ: ಶಿವ ದೇವಾಲಯಗಳಲ್ಲಿ “ಮಹಾ ಶಿವಾರಾತ್ರಿ” ಸಂಭ್ರಮ-ವಿಶೇಷ ಪೂಜೆ

ಉಡುಪಿ ಫೆ.18 (ಉಡುಪಿ ಟೈಮ್ಸ್ ವರದಿ) : ಇಂದು ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ವಿಧಿಗಳು ನಡೆಯುತ್ತಿದ್ದು, ಶಿವ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಉಡುಪಿಯ ವಿವಿಧ ಶಿವ ದೇವಸ್ಥಾನಗಳಲ್ಲಿ ಭಕ್ತಿ, ಸಂಭ್ರಮದಿಂದ ಶಿವರಾತ್ರಿ ಆಚರಣೆ ನಡೆಯುತ್ತಿದ್ದು, ಉಡುಪಿ ಶಿವ ದೇವಸ್ಥಾನ ಸೇರಿದಂತೆ ವಿವಿಧ ದೇವಳಗಳಲ್ಲಿ ಶಿವನಿಗೆ ಅಭಿಷೇಕ, ವಿಶೇಷ ಪೂಜೆ, ಅರ್ಚನೆಗಳು ನಡೆಯುತ್ತಿದೆ. ಇದರ ಜೊತೆಗೆ ಬಿಲ್ವಾರ್ಚನೆ, ಶತರುದ್ರಾಭಿಷೇಕ, ರುದ್ರ, ಚಮಕ ಪಾರಾಯಣಗಳು ನಡೆಯುತ್ತಿದೆ. ಉಡುಪಿಯ ಶ್ರೀ ಅನಂತೇಶ್ವರ ದೇಗುಲದಲ್ಲಿ 24ರವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವವು ನಡೆಯಲಿದ್ದು, ಪ್ರತಿದಿನ ಪ್ರಧಾನ ಹೋಮ, ಮಹಾಪೂಜೆ, ಕಟ್ಟೆಪೂಜೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!