ಬಿಜೆಪಿಯೇ ಭರವಸೆ ಪೋಸ್ಟರ್‌ ಗಳ ಮೇಲೆ ‘ಕಿವಿ ಮೇಲೆ ಹೂವು’ ಪೋಸ್ಟರ್‌ – ಟ್ವಿಟರ್ ನಲ್ಲಿ ಅಭಿಯಾನ

ಬೆಂಗಳೂರು, ಫೆ.18 : ರಾಜ್ಯದ ವಿವಿಧೆಡೆ ಹಾಕಿರುವ `ಬಿಜೆಪಿಯೇ ಭರವಸೆ’ ಪೋಸ್ಟರ್ ಗಳ ಮೇಲೆಯೇ ಸಾಕಪ್ಪ ಸಾಕು! ಕಿವಿ ಮೇಲೆ ಹೂವ” ಎಂದು ಬರೆದಿರುವ ಪೋಸ್ಟರ್ ಗಳು ಕಾಣಿಸಿಕೊಂಡಿದೆ. 

ಮಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಸರಕಾರದ ಸಾಧನೆಗಳನ್ನು ವಿವರಿಸುವ ಪೋಸ್ಟರ್‌ಗಳನ್ನು ಹಾಕಿದ್ದರು. ಇದೀಗ ರಾತ್ರೋ ರಾತ್ರಿ ಕಾಂಗ್ರೆಸ್‌ ಕಾರ್ಯಕರ್ತರು ಪೋಸ್ಟರ್‌ಗಳ ಮೇಲೆ ”ಸಾಕಪ್ಪ ಸಾಕು! ಕಿವಿ ಮೇಲೆ ಹೂವ” ಎಂದು ಬರೆಯುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಅಲ್ಲದೇ,  ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲೂ ಕೂಡ  #KiviMeleHoova ಹ್ಯಾಶ್ ಟ್ಯಾಗ್ ನಡಿಯಲ್ಲಿ ಅಭಿಯಾನ ನಡೆಸಿರುವ  ಕಾಂಗ್ರೆಸ್, ‘ ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳದ ಭರವಸೆ ನೀಡಿತ್ತು ಬಿಜೆಪಿ. ಆದರೆ ಆ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡದೆ ಜನರ ಕಿವಿ ಮೇಲೆ ಹೂವಿಟ್ಟಿದೆ. ಹೀಗಿರುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಂಡಲ್ ಬಜೆಟ್ ನಂಬಿಕೆಗೆ ಅರ್ಹವೇ?’ ಎಂದು ಪ್ರಶ್ನೆ ಮಾಡಿದೆ. 

ಹಾಗೂ ‘ಪ್ರಣಾಳಿಕೆ ಮತ್ತು ಕಳೆದ ಬಜೆಟ್ ನ 10% ಭರವಸೆಗಳನ್ನೂ ಈಡೇರಿಸದ ಬಿಜೆಪಿ ಮತ್ತೊಂದು ಸುಳ್ಳು ಭರವಸೆಯ ಬಜೆಟ್ ಮೂಲಕ ಜನತೆಯ ಕಿವಿ ಮೇಲೆ ಮತ್ತೊಂದು ಹೂವು ಇಟ್ಟಿದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.  

Leave a Reply

Your email address will not be published. Required fields are marked *

error: Content is protected !!