ರಾಮಾರ್ಜುನ ಚಿತ್ರದ ಟ್ರೇಲರ್ ರಿಲೀಸ್
ಬೆಂಗಳೂರು: ಅನೀಶ್ ತೇಜೇಶ್ವರ್ ನಟಿಸಿ, ನಿರ್ದೇಶಿಸಿರೊ ರಾಮಾರ್ಜುನ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಚಿತ್ರದ ಟ್ರೇಲರ್ನಲ್ಲಿ ಕಾಮಿಡಿ ಹಾಗೂ ಮಾಸ್ ಎಲಿಮೆಂಟ್ಸ್ ಇದ್ದು ಸಿನಿ ಪ್ರಿಯರಿಗೆ ಇದೊಂದು ಪಕ್ಕಾ ಮನರಂಜನೆ ನೀಡೋ ಚಿತ್ರ ಆಗಲಿದೆ.
ವಾಸು ನಾನ್ ಪಕ್ಕಾ ಕಮರ್ಶಿಯಲ್ ಚಿತ್ರ ಬಳಿಕ ಈ ಚಿತ್ರದಲ್ಲಿ ಎರಡನೇ ಬಾರಿಗೆ ಅನೀಶ್ ಹಾಗೂ ನಿಶ್ವಿಕಾ ನಾಯ್ಡು ಜೊತೆಯಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಅರುಣಾ ಬಾಲರಾಜ್ ಮೊದಲಾದ ತಾರಾ ಬಳಗವಿದೆ. ವಿಂಕ್ ವಿಶ್ಯೂಲ್ ಪ್ರೊಡಕ್ಷನ್ ಸಂಸ್ಥೆ ಅಡಿಯಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಂದಹಾಗೆ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿರುವ ಅನೀಶ್ ಗೆ ರಕ್ಷಿತ್ ಶೆಟ್ಟೆ ನಿರ್ಮಾಪಕರಾಗಿ ಸಾಥ್ ನೀಡಲಿದ್ದಾರೆ.
ಸದ್ಯ ಬಿಡುಗಡೆಯಾಗಿರುವ ಟ್ರೇಲರ್ ಸಿನಿ ಅಭಿಮಾನಿಗಳಿಗೆ ಭಾರೀ ಮೆಚ್ಚುಗೆಯಾಗಿದ್ದು ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿಸಿದೆ.