ಮಾರ್ಚ್‌ನಲ್ಲಿ “ಏರೆಗಾವುಯೆ ಕಿರಿ ಕಿರಿ” ತೆರೆಗೆ

ಮಂಗಳೂರು : ರೋಶನ್ ವೇಗಸ್ ಅವರ ನಿರ್ಮಾಣದಲ್ಲಿ ವೇಗಸ್ ಫಿಲಮ್ಸ್ ಲಾಂಛನದಲ್ಲಿ ಹೆಸರಾಂತ ಹಿರಿಯ ನಿರ್ದೇಶಕ ರಾಮ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿ ಬಂದಿರುವಂತ ಹಾಸ್ಯಮಯ ತುಳು ಚಿತ್ರ ‘ಏರೆಗಾವುಯೆ ಕಿರಿಕಿರಿ’ ಮಾರ್ಚ್ ತಿಂಗಳಿನಲ್ಲಿ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.


ಕಥೆಯ ಬಗ್ಗೆ ಹೇಳೋದಾದ್ರೆ ಮುಖ್ಯವಾಗಿ ಯಾರಿಂದಲೋ ಮತ್ಯಾರೋ ಕಿರಿಕಿರಿ ಅನುಭವಿಸುವುದು. ಅನಿವಾರ್ಯ ಕಾರಣಗಳಿಗೆ ಕಳ್ಳತನ ಮಾಡೋರ‍್ಯಾರೋ, ಸಿಕ್ಕಿಬೀಳೋರು ಇನ್ಯಾರೋ, ಪೊಲೀಸರಿಂದ ಒದೆ ತಿನ್ನೋರು ಮತ್ಯಾರೋ. ಇಂತಹ ಹತ್ತು ಹಲವು ಕಿರಿಕಿರಿಯ, ಗೊಂದಲದ, ಹಾಸ್ಯಮಯ ಪ್ರಸಂಗಗಳ ಸರಮಾಲೆಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಪ್ರಯತ್ನವೇ ಏರೆಗಾವುಯೇ ಕಿರಿಕಿರಿ ಚಿತ್ರದ ಸಾರಾಂಶ.


ತೆರೆಯ ಮೇಲೆ ಮುಖ್ಯ ಪಾತ್ರದಲ್ಲಿ ಕುಸೆಲ್ದರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ ಬೊಳಾರ್, ಮಹಮ್ಮದ್ ನಹೀಮ್, ರೋಶನ್ ವೇಗಸ್, ಐಶ್ವರ್ಯ ಹೆಗ್ಡೆ, ಶ್ರದ್ಧಾ ಸಾಲಿಯಾನ್, ಪ್ರದೀಪ್ ಚಂದ್ರ, ಹರೀಶ್ ವಾಸು ಶೆಟ್ಟಿ , ಸಾಯಿ ಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಸುಂದರ್ ರೈ ಮಂದಾರ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ದಿನೇಶ್ ಕೋಡಪದವು, ಸುನಿಲ್ ನೆಲ್ಲಿಗುಡ್ಡೆ, ಸರೋಜಿನಿ ಶೆಟ್ಟಿ, ಶೇಖರ್ ಭಂಡಾರಿ, ರಘು ಪಾಂಡೇಶ್ವರ, ಪವಿತ್ರ ಶೆಟ್ಟಿ ಹಾಗೂ ಇನ್ನೂ ಅನೇಕ ಕಲಾವಿದರ ದಂಡೇ ಇದೆ.


ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಸಂಗೀತ ಈ ಚಿತ್ರಕ್ಕಿದ್ದು, ಸಾಹಿತ್ಯ ಮತ್ತು ಸಂಭಾಷಣೆ ಡಿ.ಬಿ.ಸಿ ಶೇಖರ್ ಅವರು ಬರೆದಿದ್ದು, ಉಳಿದಂತೆ ಛಾಯಾಗ್ರಹಣ ರವಿ ಚಂದನ್, ನೃತ್ಯ ಮದನ್ ಹರಿಣಿ, ಸಾಹಸ ಮಾಸ್ ಮಾದ, ಚಿತ್ರಕಥೆ ಸಚಿನ್ ಶೆಟ್ಟಿ ಕುಂಬ್ಳೆ ಹಾಗೂ ಸಹ ನಿರ್ದೇಶನ ರಾಮ್ ದಾಸ್ ಸಸಿಹಿತ್ಲು ಅವರದ್ದಾಗಿದೆ.


ಹಿಂದೂ ಕ್ರಿಶ್ಚನ್ ಮುಸ್ಲಿಂ ಭಾವೈಕ್ಯದಲ್ಲಿ ಎಲ್ಲ ಸಮೂಹದವರೂ ಒಟ್ಟಾಗಿ ಕೈ ಜೋಡಿಸಿ ಕೆಲಸ ಮಾಡಿದಂತಹ ಚಿತ್ರ ಅನ್ನುವುದು ವಿಶೇಷತೆ. ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲವನ್ನು ಮೂಡಿಸಿರುವ ಏರೆಗಾವುಯೇ ಕಿರಿಕಿರಿ ಚಿತ್ರವನ್ನು ಮಾರ್ಚ್ ತಿಂಗಳಲ್ಲಿ ತೆರೆಯ ಮೇಲೆ ತರುವ ಯೋಜನೆಯಲ್ಲಿದ್ದಾರೆ ನಿರ್ದೇಶಕರಾದ ರಾಮ್ ಶೆಟ್ಟಿ ಮತ್ತು ನಿರ್ಮಾಪಕರಾದ ರೋಶನ್ ವೇಗಸ್

Leave a Reply

Your email address will not be published. Required fields are marked *

error: Content is protected !!