ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ ಬಾಳೆಬರೆ ಘಾಟ್ ಕಾಮಗಾರಿ -ಬದಲಿ ಮಾರ್ಗ ವ್ಯವಸ್ಥೆ

ಉಡುಪಿ ಫೆ.4 (ಉಡುಪಿ ಟೈಮ್ಸ್ ವರದಿ) : ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ ನಲ್ಲಿ ಕಾಂಕ್ರೀಟ್ ಪೇವ್ ಮೆಂಟ್ ಕಾಮಗಾರಿ ನಿರ್ಮಾಣ ಹಿನ್ನೆಲೆಯಲ್ಲಿ ಫೆ.5 ರಿಂದ ಎ.5 ರ ವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ತಾತ್ಕಾಲಿಕ ಆದೇಶವು ಫೆ.5 ರಿಂದ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ನೀಡಿ ಸೂಚನೆ ನೀಡಿದ್ದಾರೆ. ಅದರಂತೆ ರಾಜ್ಯ ಹೆದ್ದಾರಿ-52 ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆ ಹೋಗುವ ಲಘು ವಾಹನಗಳು ತೀರ್ಥಹಳ್ಳಿ-ಹಾಲಾಡಿ-ಬಸ್ರೂರು-ಕುಂದಾಪುರ ರಸ್ತೆ ಮತ್ತು ತೀರ್ಥಹಳ್ಳಿ-ಹೆಬ್ರಿ-ಉಡುಪಿ-ಕುಂದಾಪುರ ರಸ್ತೆ ಮೂಲಕ ಸಂಚರಿಸಬಹುದಾಗಿದೆ.

ರಾಜ್ಯ ಹೆದ್ದಾರಿ-52 ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಭಾರೀ ವಾಹನಗಳು (ಮಲ್ಟಿ ಆಕ್ಸೆಲ್ ,ಎ/ವಿ ಹೊರತುಪಡಿಸಿ ) ತೀರ್ಥಹಳ್ಳಿ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ಮಾರ್ಗವಾಗಿ ಸಂಚರಿಸಬಹುದು.

ತೀರ್ಥಹಳ್ಳಿ-ಯಡೂರು-ಹುಲಿಕಲ್-ಕುಂದಾಪುರ ಕಡೆ ಹೋಗುವ ಲಘು/ಭಾರಿ ವಾಹನಗಳು(ಆರ್.ಎಲ್.ಡಬ್ಲ್ಯು16200 ಕೆಜಿ ವರೆಗೆ ಭಾರಿ ಸರಕು ವಾಹನಗಳ ಸಂಚಾರಕ್ಕೆ ಮಾತ್ರ) ತೀರ್ಥಹಳ್ಳಿ-ಯಡೂರು-ಮಾಸ್ತಿಕಟ್ಟೆ-ನಗರ-ಕೊಲ್ಲೂರು-ಕುಂದಾಪುರ ಮೂಲಕ ಸಂಚರಿಸಬಹುದಾಗಿದೆ.

ಭಾರಿ ಸರಕು ಮಲ್ಟಿ ಆಕ್ಸೆಲ್, ಎ/ವಿ ಹೊರತುಪಡಿಸಿ ಲಘು ವಾಹನಗಳು ಹೊಸನಗರ-ನಗರ-ಕೊಲ್ಲೂರು-ಕುಂದಾಪುರ ರಸ್ತೆ ಮೂಲಕ ಪ್ರಯಾಣಿಸ ಬಹುದು ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!