ಉಡುಪಿ ಲಯನ್ಸ್ ಕ್ಲಬ್: ವಿವಿಧ ಸಮಾಜಮುಖಿ ಕಾರ್ಯಗಳಿಗೆ ಚಾಲನೆ

ಉಡುಪಿ ಜ.4(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಲಯನ್ಸ್ ಕ್ಲಬ್ ವತಿಯಿಂದ ಕೈಗೊಳ್ಳಲಾದ ಲಕ್ಷಾಂತ ರೂ ಮೌಲ್ಯದ ವಿವಿಧ ಸಹಾಯ, ನೆರವಿನ ಯೋಜನೆಗಳ ಉದ್ಘಾಟನೆ ಇಂದು ನಡೆಯಿತು.

ಲಯನ್ಸ್ ಜಿಲ್ಲಾ ಗವರ್ನರ್ ಲ.ಡಾ.ಎಮ್.ಕೆ.ಭಟ್ ಅವರು ಇಂದು ಲಯನ್ಸ್ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ನಗರದ ವಿವಿಧ ಕಡೆಗಳಲ್ಲಿ ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಕೈಗೊಂಡಿರುವ ನೆರವಿನ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ಇಂದು ಲಯನ್ಸ್ ಜಿಲ್ಲಾ ಗವರ್ನರ್ ಲ.ಡಾ.ಎಮ್ ಕೆ ಭಟ್ ಅವರು ಉಡುಪಿಯ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಲಯನ್ಸ್ ವತಿಯಿಂದ 60 ರೂ. ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ ಮಕ್ಕಳಿಗೆ ವ್ಯವಸ್ಥಿತವಾದ ಕೈ ತೊಳೆಯುವ ನೀರಿನ ವ್ಯವಸ್ಥೆಯನ್ನು, ಉದ್ಯಾವರ ಗುಡ್ಡೆಂಗಡಿಯ “ಕನಸಿನ ಮನೆ”ಯ ಹಿರಿಯ ಸದಸ್ಯರಿಗೆ ಬಟ್ಟೆ ವಿತರಣೆ, ಅಲೆವೂರು ಸೇರಿದಂತೆ ಎರಡು ಕಡೆಯಲ್ಲಿ ಶಾಲಾ ಸಮೀಪದಲ್ಲಿ ಸಂಚಾರ ನಿಯಮದ ಫಲಕ ಅಳವಡಿಕೆ, ಮಣಿಪಾಲ್ ಹೆಲ್ತ್ ಸೆಂಟರ್ ನ ಎದುರುನಿರ್ಮಿಸಲಾದ ವ್ಯವಸ್ಥಿತವಾದ ಛಾವಣಿ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ಉಡುಪಿ ಲಯನ್ಸ್ ಅಧ್ಯಕ್ಷ ದಿವಾಕರ್ ಶೆಟ್ಟಿ ಮಂಚಿ, ಕಾರ್ಯದರ್ಶಿ ರವಿರಾಜ್ ಯುಎಸ್, ಖಜಾಂಚಿ ವಿಜಯ ಕುಮಾರ್ ಮುದ್ರಾಡಿ, ಹಿರಿಯ ಲಯನ್ಸ್ ಸದಸ್ಯ ಲ. ಅಲೆವೂರು ಶ್ರೀಧರ್ ಶೆಟ್ಟಿ, ಮಾಜಿ ಜಿಲ್ಲಾ ಲಯನ್ಸ್ ಗವರ್ನರ್ ಡಾ. ಎ ರವೀಂದ್ರ ನಾಥ್ ಶೆಟ್ಟಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಲಯನ್ಸ್ ಬಗ್ಗೆ ಮಾತನಾಡಿದ ಲಯನ್ಸ್ ಜಿಲ್ಲಾ ಗವರ್ನರ್ ಲ.ಡಾ. ಎಮ್ ಕೆ ಭಟ್ ಅವರು, ಜನರಿಗೆ ಏನು ಸೇವೆ ಬೇಕು ಎಂಬುದನ್ನ ಗುರುತಿಸಿ ಆ ಸೇವೆಯನ್ನು ಲಯನ್ಸ್ ಮಾಡುತ್ತಾ ಬರುತ್ತಿದ್ದೇವೆ. ಲಯನ್ಸ್ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಈ ನಾಲ್ಕು ಜಿಲ್ಲೆಗಳಲ್ಲಿ 116 ಕ್ಲಬ್ ಗಳಿವೆ. ಇವುಗಳ ಆಡಳಿತಾತ್ಮಕ ಸುಧಾರಣೆಗೆ 9 ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿದೆ. ಹಾಗೂ ಒಂದೊಂದು ಪ್ರಾಂತ್ಯಗಳನ್ನು ಕೂಡ ಎರಡರಿಂದ ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಒಟ್ಟು ಉಡುಪಿ ಜಿಲ್ಲೆಯಲ್ಲಿ 9 ಪ್ರಾಂತ್ಯ ಮತ್ತು 23 ವಲಯಗಳಿವೆ. ಮಾತ್ರವಲ್ಲದೆ ಪ್ರತಿ ಹಳ್ಳಿಗಳಲ್ಲಿಯೂ ಈಗ ಲಯನ್ಸ್ ಕ್ಲಬ್ ಇದೆ ಉಡುಪಿಯೊಂದರಲ್ಲಿ ಸುಮಾರು 80 ಲಯನ್ಸ್ ಕ್ಲಬ್ ಗಳಿವೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಉಡುಪಿ ನಿರಂತರ ಸಮಾಜ ಮುಖಿ ಕಾರ್ಯಕ್ರಗಳನ್ನು ನಡೆಸುತ್ತಾ ಬರುತ್ತಿದ್ದು, ಈಗಾಗಲೇ ವರುಷದ ಎಲ್ಲಾ ವಿಶೇಷ ದಿನಗಳನ್ನು , ವನಮಹೋತ್ಸವ ಮತ್ತು ಅಶಕ್ತರಿಗೆ ವೈದ್ಯಕೀಯ ನೆರವು, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವು, ಆರೋಗ್ಯ ತಪಾಸಣಾ ಶಿಬಿರ, ವಿಶೇಷ ಮಕ್ಕಳಿಗೆ ಸಹಕಾರ, ಆರ್ಥಿಕ ಸಹಾಯ ಹೀಗೆ ನೂರಾರು ಸಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಾ ಬರುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!