ಉಡುಪಿ: 3 ವರ್ಷದ ಹೆಣ್ಣು ಮಗುವಿನೊಂದಿಗೆ ಸ್ನೇಹಿತ ನಾಪತ್ತೆ- ದೂರು ದಾಖಲು

ಉಡುಪಿ ಫೆ.4 (ಉಡುಪಿ ಟೈಮ್ಸ್ ವರದಿ): ಮೂರು ವರ್ಷದ ಮಗುವನ್ನು ಕರೆದುಕೊಂಡು ಹೋದ ಸ್ನೇಹಿತ ಮಗುವಿನೊಂದಿಗೆ ನಾಪತ್ತೆಯಗಿರುವ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಣಿಪಾಲದ ಮೂಡು ಸಗ್ರಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಾಗಲಕೋಟೆ ಮೂಲದ ಶಾಂತಾ ಅವರ 3 ವರ್ಷದ ಮಗಳು ಸುಕನ್ಯಾಳನ್ನು ಜ.8 ರಂದು ಬೆಳಿಗ್ಗೆ ತನ್ನ ಸ್ನೇಹಿತ ಸಂಗಮೇಶನು ಮೂಡು ಸಗ್ರಿಯಲ್ಲಿರುವ ಬಾಡಿಗೆ ಮನೆಯಿಂದ ಕರೆದುಕೊಂಡು ಹೋಗಿ ಸ್ನೇಹಿತ ಶಂಕರನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದನು. ಆದರೆ ಬಳಿಕ ವಾಪಾಸು ಸಂಜೆ ಒಬ್ಬನೇ ಮನೆಗೆ ಬಂದಿದ್ದನು ಈ ವೇಳೆ ಶಾಂತಾ ರವರು ಮಗುವಿನ ಬಗ್ಗೆ ವಿಚಾರಿಸಿದಾಗ ತಾನು ಮಗುವನ್ನು ಕರೆದುಕೊಂಡು ಬರುವುದಾಗಿ ಹೇಳಿ ಜ.12 ರಂದು ಹೋದವನು ಈವರೆಗೆ ಮನೆಗೆ ಬಾರದೇ ತನ್ನ ಮೊಬೈಲ್ ನ್ನು ಕೂಡಾ ಸ್ವಿಚ್ ಆಫ್ ಮಾಡಿರುತ್ತಾನೆ. ಮಗುವಿನ ಬಗ್ಗೆ ಶಂಕರರವರಿಗೆ ಕರೆ ಮಾಡಿ ವಿಚಾರಿಸಿದಲ್ಲಿ ಸಂಗಮೇಶ್ ಹಾಗೂ ಮಗಳು ಸುಕನ್ಯಾ ಮನೆಗೆ ಬಂದಿಲ್ಲವಾಗಿ ತಿಳಿಸಿದ್ದು ತನ್ನ ಮಗಳು ಸುಕನ್ಯಾ ಮತ್ತು ಸಂಗಮೇಶ್ ರವರು ಈವೆರೆಗೂ ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಇವರ ಬಗ್ಗೆ ಎಲ್ಲಾ ಕಡೆ ವಿಚಾರಿಸಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಶಾಂತಾ ಅವರು ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!