“ಮಿಸ್ಟರ್ ಉಡುಪಿ- 2023” ಕಟಪಾಡಿಯ ರಾಜೇಶ್’ಗೆ ದೇಹದಾಡ್ಯ ಪ್ರಶಸ್ತಿ

ಉಡುಪಿ ಜ.30(ಉಡುಪಿ ಟೈಮ್ಸ್ ವರದಿ):ಮಾಂಡವಿ ಬಿಲ್ಡರ್ಸ್ ಮತ್ತು ಇ- ಫಿಟ್ನೆಸ್ ಜಿಮ್ ಇದರ ವತಿಯಿಂದ ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್, ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್, ಇಂಡಿಯನ್ ಬಾಡಿ ಬಿಲ್ಡರ್ಸ್ ಫೆಡರೇಶನ್ ಇದರ ಸಹಯೋಗದೊಂದಿಗೆ “ಮಿಸ್ಟರ್ ಉಡುಪಿ 2023” ದೇಹದಾಡ್ಯ ಸ್ಪರ್ಧೆ ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜ್ ಮೈದಾನದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು, ಬಾಡಿ ಬಿಲ್ಡರ್‍ಗಳು ಬಹಳಷ್ಟು ಶ್ರಮ ವಹಿಸುತ್ತಾರೆ. ಅವರ ಶ್ರಮ ನಮ್ಮಂತವರಿಗೆ ಅರ್ಥವಾಗುವುದಿಲ್ಲ. ಅವರು ಕಠಿಣ ಶ್ರವ್ಯಕ್ತಿತ್ವದಮವಹಿಸಿ ಇಲ್ಲಿ ಬಂದು ತಮ್ಮ ಶ್ರಮವನ್ನು ಪ್ರದರ್ಶಿಸುತ್ತಾರೆ. ಅವರ ಈ ಶ್ರಮಕ್ಕೆ ಪ್ರತಿಫಲ ಸಿಗಬೇಕಾದರೆ ಇಂತಹ ಬಾಡಿ ಬಿಲ್ಡಿಂಗ್ ಸ್ಪರ್ಧಾ ಕಾರ್ಯಕ್ರಮಗಳು ನಡೆಯಬೇಕು. ಆದ್ದರಿಂದ ಯಾರಿಂದಲೂ ಡೊನೇಶನ್ ಸ್ವೀಕರಿಸದೇ ಸ್ವಂತ ಕರ್ಚಿನಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಆಯೋಜಿಸುತ್ತಿರುವ ಜೆರ್ರಿ ವಿನ್ಸಂಟ್ ಡಯಾಸ್ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು ಎಂದು ಮಾಂಡವಿ ಬಿಲ್ಡರ್ಸ್ ನ್ನು ಅಭಿನಂದಿಸಿದರು.

ಈ ಸ್ಪರ್ಧೆಯಲ್ಲಿ ಕಟಪಾಡಿಯ ವಜ್ರ ಜಿಮ್‍ನ ರಾಜೇಶ್ ಅವರು ಮಿ.ಉಡುಪಿ ಪಟ್ಟವನ್ನು ಗೆದ್ದುಕೊಂಡಿದ್ದು, ಕಡಿಯಾಳಿಯ ಧೀರಜ್ ದ್ವಿತೀಯ ಚಾಂಪಿಯನ್ ಆಗಿದ್ದಾರೆ. ಇವರೊಂದಿಗೆ ಕಡಿಯಾಳಿಯ ಹೂಸ್ಟನ್ ಬ್ರೈಸ್ ತೃತೀಯ ಚಾಂಪಿಯನ್ ಹಾಗೂ ಇ ಫಿಟ್ನೆಸ್ ನ ಗ್ಲೆನ್ ಡಯಾಸ್ ಚತುರ್ಥ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಇದರ ವ್ಯವಸ್ಥಾಪಕ ನಿರ್ದೇಶಕ ಡಾ.ಜೆರ್ರಿ ವಿನ್ಸೆಂಟ್ ಡಯಾಸ್, ಶಾಸಕ ರಘುಪತಿ ಭಟ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರ. ಕಾರ್ಯದರ್ಶಿ ಯತೀಶ್ ಕರ್ಕೆರ, ಉದ್ಯಾವರದ ಸೌಂದರ್ಯ ಇದರ ಹರೀಶ್ ಕುಮಾರ್, ನ್ಯಾಷನಲ್ ಬಾಡಿ ಬಿಲ್ಡರ್ ಗೋವರ್ಧನ್ ಬಂಗೇರ ಉಪಸ್ಥಿತರಿದ್ದರು.

2 thoughts on ““ಮಿಸ್ಟರ್ ಉಡುಪಿ- 2023” ಕಟಪಾಡಿಯ ರಾಜೇಶ್’ಗೆ ದೇಹದಾಡ್ಯ ಪ್ರಶಸ್ತಿ

Leave a Reply

Your email address will not be published. Required fields are marked *

error: Content is protected !!