ಕಾರ್ಕಳ: ಕುಸಿದು ಬಿದ್ದು ಪಳ್ಳಿ ಗ್ರಾಮ ಸಹಾಯಕ ಮೃತ್ಯು

ಕಾರ್ಕಳ ಜ.30(ಉಡುಪಿ ಟೈಮ್ಸ್ ವರದಿ): ಹೃದಯಾಘಾತದಿಂದ ಕಾರ್ಕಳದ ಪಳ್ಳಿ ಗ್ರಾಮದ ಗ್ರಾಮ ಸಹಾಯಕರಾಗಿದ್ದ ಸುಂದರ ಅವರು ಮೃತಪಟ್ಟಿದ್ದಾರೆ. 

ಸುಂದರ (40) ಅವರು ನಿನ್ನೆ ಸಂಜೆ 5:30 ರ ಸುಮಾರಿಗೆ ಕಛೇರಿಗೆ ಬೇಕಾದ ಪರಿಕರಗಳನ್ನು ತರಲು ತೆರಳಿದ್ದರು.

ಸಾರ್ವಜನಿಕರೊಬ್ಬರು ಪಳ್ಳಿ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಅಭಿಷೇಕ್‌ ಕುಮಾರ್‌ ಅವರಿಗೆ ಕರೆ ಮಾಡಿ ಸುಂದರರವರು ಪಳ್ಳಿ ಶಾಲೆಯ ಬಳಿ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಅಭಿಷೇಕ್ ಕುಮಾರ್ ಅವರು ಸ್ಥಳಕ್ಕೆ ತೆರಳಿದಾಗ ಸುಂದರ ರವರು ಎದೆಗೆ ಕೈ ಹಿಡಿದು ಕುಳಿತಿದ್ದು ಕಂಡು ಬಂದಿತ್ತು. ತಕ್ಷಣ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಸುಂದರರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.

 ಈ ಬಗ್ಗೆ ಅಭಿಷೇಕ್ ಕುಮಾರ್ ಅವರು ನೀಡಿದ ಮಾಹಿತಿಯಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!